newsics.com
ಉತ್ತರ ಪ್ರದೇಶ: ಮಹಿಳೆಯೊಬ್ಬಳು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತಲೆ ಶೌಚಾಲಯದ ಕಮೋಡ್ ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ವೈದ್ಯರು ಗರ್ಭಿಣಿ ಮಹಿಳೆ ಹಸೀನ್ ಬಾನೊ (30) ಅವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಪತಿ ಮೊಯಿನ್ ವೈದ್ಯರಿಗೆ ಎಷ್ಟೇ ಮನವಿ ಮಾಡಿದರೂ ಆಸ್ಪತ್ರೆ ಒಪ್ಪಿಕೊಂಡಿಲ್ಲ.
ನೋವು ತಡೆದುಕೊಳ್ಳದೆ ಮಹಿಳೆ ಶೌಚಾಲಯಕ್ಕೆ ಹೋಗಿದ್ದು, ಅಲ್ಲಿ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ನವಜಾತ ಶಿಶು ಜಾರಿಬಿದ್ದು ತಲೆ ಕಮೋಡ್ ನಲ್ಲಿ ಸಿಲುಕಿಕೊಂಡಿದೆ.
ಆಸ್ಪತ್ರೆಯ ಸಿಬ್ಬಂದಿ ಕಮೋಡ್ ಮುರಿದು ಮಗುವನ್ನು ಹೊರತೆಗೆದಿದ್ದರೂ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಪ್ರಕರಣದ ತನಿಖೆಗೆ ಆಸ್ಪತ್ರೆ ತಂಡ ರಚಿಸದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಮುಖ್ಯಸ್ಥರು ಹೇಳಿದ್ದಾರೆ.
ಐತಿಹಾಸಿಕ ಜಂಬೂ ಸವಾರಿ ಆರಂಭ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ