newsics.com
ಚಂಡೀಗಢ: ದೇಶದ ಕುಸ್ತಿತಾರೆಯರಾದ ಭಜರಂಗ್ ಪೂನಿಯಾ ಹಾಗೂ ಸಂಗೀತಾ ಪೋಗಟ್ ಗುರುವಾರ(ನ.26) ಸಪ್ತಪದಿ ತುಳಿದರು.
ಹರಿಯಾಣದ ಬಲಾಲಿಯಲ್ಲಿ ನಡೆದ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತರಾಗಿರುವ 26 ವರ್ಷದ ಭಜರಂಗ್ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ‘ದಂಗಲ್’ ಸಿನಿಮಾ ಖ್ಯಾತಿಯ ಪೋಗಟ್ ಸಹೋದರಿಯರ ಪೈಕಿ ಕಿರಿಯರಾದ 22 ವರ್ಷದ ಸಂಗೀತಾ, ಸೋನೆಪತ್ನಲ್ಲಿ ಕುಸ್ತಿ ತರಬೇತಿ ಶಿಬಿರದ ವೇಳೆ ಭಜರಂಗ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು.
‘ನಾನಿಂದು ನನ್ನ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದೇನೆ. ನಾವಿಬ್ಬರೂ ಹೊಸ ಪ್ರಯಾಣ ಆರಂಭಿಸಲು ಕಾತರಗೊಂಡಿದ್ದೇವೆ’ ಎಂದು ಭಜರಂಗ್ ಪೂನಿಯಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಹಣ ರವಾನೆಗೆ ಜನವರಿಯಿಂದ ಗೂಗಲ್ ಪೇನಲ್ಲೂ ಶುಲ್ಕ ಸಾಧ್ಯತೆ
ದೇಶದ ಐಟಿ ಪಿತಾಮಹ, ಟಿಸಿಎಸ್ ಸಂಸ್ಥಾಪಕ ಕೊಹ್ಲಿ ಇನ್ನಿಲ್ಲ
ಕೇಂದ್ರದಿಂದಲೇ ಕೊರೋನಾ ಲಸಿಕೆ ಉಚಿತ ವಿತರಣೆ ಸಾಧ್ಯತೆ
ಹಿರಿಯ ಸಾಹಿತಿ ದೇಶಾಂಶ ಹುಡಗಿ ಇನ್ನಿಲ್ಲ