Saturday, December 10, 2022

ಕೇರಳದ ಕಲ್ಲು ಗಣಿಯಲ್ಲಿ ಸ್ಫೋಟ: ರಾಜ್ಯದ ಕಾರ್ಮಿಕ ಸಹಿತ ಇಬ್ಬರ ಬಲಿ

Follow Us

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ಮಲಯಾಟ್ಟೂರು ಎಂಬಲ್ಲಿ ಕಲ್ಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ದುರಂತಕ್ಕೆ ಬಲಿಯಾದ ಓರ್ವ ಕಾರ್ಮಿಕ ರಾಜ್ಯದ ಚಾಮರಾಜನಗರ ನಿವಾಸಿ ಎಂದು ತಿಳಿದು ಬಂದಿದೆ. ಇನ್ನೊಬ್ಬರು ತಮಿಳುನಾಡು ಮೂಲದವರಾಗಿದ್ದಾರೆ.

ಇಂದು ನಸುಕಿನ ಜಾವ 3.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ಕಲ್ಲು ಒಡೆಯಲು ತಂದಿದ್ದ ಸ್ಫೋಟಕಕ್ಕೆ ಬೆಂಕಿ ತಗುಲಿದ ಪರಿಣಾಮ ಈ ದುರಂತ ನಡೆದಿದೆ ಎಂದು ಪ್ರಾಥಮಿಕ ವರದಿ ಸೂಚಿಸಿದೆ.

ಇದೇ ವೇಳೆ ಇತ್ತೀಚೆಗೆ ಕೇರಳದಲ್ಲಿ ಬಂಧಿತರಾದ ಶಂಕಿತ ಭಯೋತ್ಪಾದಕರಿಗೂ ಈ ಸ್ಫೋಟಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ.

 

ಮತ್ತಷ್ಟು ಸುದ್ದಿಗಳು

vertical

Latest News

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...

ಇಂಡಿಗೋ ವಿಮಾನದಲ್ಲಿ ಹರಿದ ಸೀಟು: ಪೇಟಿಎಂ‌ ಸಿಇಒಗೆ ಅಚ್ಚರಿ!

newsics.com ಮುಂಬೈ: ನೀವು ಬಸ್‌ನಲ್ಲೋ, ಆಟೋದಲ್ಲೋ ಹರಿದ ಸೀಟುಗಳನ್ನು ನೋಡಿರಬಹುದು. ಆದರೆ ವಿಮಾನದಲ್ಲೂ ಹರಿದ ಸೀಟಿನ ಚಿತ್ರವನ್ನು ಪೇಟಿಎಂ ಸಿಇಒ Paytm CEO ಹಂಚಿಕೊಂಡಿದ್ದಾರೆ. 'ಈ ಏರ್‌ಲೈನ್‌ನಲ್ಲಿ ಮಾತ್ರ ಇಂತಹ ಹರಿದ ಸೀಟನ್ನು ಮೊದಲು ನೋಡಲಾಗಿದೆ'...
- Advertisement -
error: Content is protected !!