ಕೇರಳದ ಕಲ್ಲು ಗಣಿಯಲ್ಲಿ ಸ್ಫೋಟ: ರಾಜ್ಯದ ಕಾರ್ಮಿಕ ಸಹಿತ ಇಬ್ಬರ ಬಲಿ

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ಮಲಯಾಟ್ಟೂರು ಎಂಬಲ್ಲಿ ಕಲ್ಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ದುರಂತಕ್ಕೆ ಬಲಿಯಾದ ಓರ್ವ ಕಾರ್ಮಿಕ ರಾಜ್ಯದ ಚಾಮರಾಜನಗರ ನಿವಾಸಿ ಎಂದು ತಿಳಿದು ಬಂದಿದೆ. ಇನ್ನೊಬ್ಬರು ತಮಿಳುನಾಡು ಮೂಲದವರಾಗಿದ್ದಾರೆ. ಇಂದು ನಸುಕಿನ ಜಾವ 3.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ಕಲ್ಲು ಒಡೆಯಲು ತಂದಿದ್ದ ಸ್ಫೋಟಕಕ್ಕೆ ಬೆಂಕಿ ತಗುಲಿದ ಪರಿಣಾಮ ಈ ದುರಂತ ನಡೆದಿದೆ ಎಂದು ಪ್ರಾಥಮಿಕ ವರದಿ ಸೂಚಿಸಿದೆ. ಇದೇ ವೇಳೆ ಇತ್ತೀಚೆಗೆ ಕೇರಳದಲ್ಲಿ ಬಂಧಿತರಾದ ಶಂಕಿತ ಭಯೋತ್ಪಾದಕರಿಗೂ … Continue reading ಕೇರಳದ ಕಲ್ಲು ಗಣಿಯಲ್ಲಿ ಸ್ಫೋಟ: ರಾಜ್ಯದ ಕಾರ್ಮಿಕ ಸಹಿತ ಇಬ್ಬರ ಬಲಿ