ತಿರುವನಂತಪುರಂ: ಯಾರ ಸಾವು ಯಾವುದರಲ್ಲಿ ಅಂತ ಯಾರಿಗೂ ಗೊತ್ತಿರೋದೇ ಇಲ್ಲ. ಇಂತಹುದೇ ಘಟನೆಯೊಂದರಲ್ಲಿ ಬ್ಯಾಂಕ್’ಗೆ ಬಂದಿದ್ದ ಮಹಿಳೆ ಬ್ಯಾಂಕ್’ನ ಗ್ಲಾಸ್ ಬಾಗಿಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ.
ಕೇರಳದ ತಿರುವನಂತಪುರಂನ ಪೆರುಂಬವೂರ್ ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪೆರುಂಬವೂರಿನ ಬೀನಾ ಬಿಜು ಪಾಲ್ ಎಂದು ಗುರುತಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಲದ ಬ್ರ್ಯಾಂಚ್ ಗೆ ಬಂದಿದ್ದ ಬೀನಾ ಗಾಡಿನಲ್ಲೇ ಕೀ ಮರೆತು ಬಂದಿದ್ದರು. ಹೀಗಾಗಿ ಅದನ್ನು ತರಲು ವೇಗವಾಗಿ ಹೊರಕ್ಕೆ ಓಡಿದ್ದಾರೆ. ಆಗ ಬ್ಯಾಂಕ್’ನಿಂದ ಹೊರಕ್ಕೆ ಹೋಗಲು ಗ್ಲಾಸ್’ನ ಬಾಗಿಲು ಅಳವಡಿಸಲಾಗಿದ್ದನ್ನು ಬೀನಾ ಮರೆತಿದ್ದಾರೆ. ರಭಸದಲ್ಲಿ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೀನಾ ಎದೆಗೆ ಪೆಟ್ಟಾಗಿದ್ದು ಅವರ ಹೊಟ್ಟೆಗೆ ಗ್ಲಾಸಿನ ಚೂರು ಚುಚ್ಚಿದೆ. ಇದರಿಂದ ರಕ್ತಸ್ರಾವವಾದ ಪರಿಣಾಮ ಬೀನಾ ಸಾವನ್ನಪ್ಪಿದ್ದಾರೆ.
ಬೀನಾರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ರಕ್ತಸ್ರಾವ ಹೆಚ್ಚುವವರೆಗೆ ಬ್ಯಾಂಕ್’ನಲ್ಲೇ ಕೂರಿಸಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿದೆ.