NEWSICS.COM
ಮಾಚೆಡಿ: ಜಮ್ಮು-ಕಾಶ್ಮೀರದ ಮಾಚೆಡಿಯಲ್ಲಿ ಶುಕ್ರವಾರ (ಡಿ.25) ಬ್ಯಾರಕ್ನ ಗೋಡೆ ಕುಸಿದು ಇಬ್ಬರು ಸೈನಿಕರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಯೋಧರು ಬ್ಯಾರಕ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಇಬ್ಬರು ಹುತಾತ್ಮರಾಗಿದ್ದಾರೆ. ಮೃತಯೋಧರನ್ನು ಸೋನಿಪತ್ ಸುಬೇದರ್ ಎಸ್ ಎನ್ ಸಿಂಗ್ , ನಾಯಕ್ ಪರ್ವೇಜ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನೋರ್ವ ಯೋಧ ಸೆಫೋಲ್ ಮಂಗಲ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.