newsics.com
ನವದೆಹಲಿ: ಬಾಸ್ಮತಿ ಅಕ್ಕಿ ರಫ್ತು ಮಾಡಲು ನಿಗದಿಪಡಿಸಿರುವ ಕನಿಷ್ಠ ರಫ್ತು ದರವನ್ನು (ಎಂಇಪಿ) ಕೇಂದ್ರ ಸರ್ಕಾರವು ಇಳಿಕೆ ಮಾಡಲಿದೆ ಎಂದು ಮೂಲಗಳು ಹೇಳಿವೆ. ಪ್ರತಿ ಟನ್ ಬಾಸ್ಮತಿ ಅಕ್ಕಿ ಬೆಲೆಯನ್ನು ಈಗಿರುವ 1,200 ಡಾಲರ್ (99,600) ಬದಲಾಗಿ 850 ಡಾಲರ್ ಗೆ (70,550) ಇಳಿಕೆ ಮಾಡಲಿದೆ ಎಂದು ತಿಳಿಸಿವೆ.
ಪ್ರೀಮಿಯಂ ಬಾಸ್ಮತಿ ಅಕ್ಕಿ ಬದಲಾಗಿ ಬಾಸ್ಮತಿ ಅಲ್ಲದ ಅಕ್ಕಿಯನ್ನು ಅಕ್ರಮವಾಗಿ ರಫ್ತು ಮಾಡುವ ಸಾಧ್ಯತೆಯನ್ನು ತಡೆಯಲು ಕೇಂದ್ರ ಸರ್ಕಾರವು ಪ್ರತಿ ಟನ್ ಗೆ 1,200 ಡಾಲರ್’ಗಿಂತಲೂ ಕಡಿಮೆ ಬೆಲೆಗೆ ಬಾಸ್ಮತಿ ಅಕ್ಕಿ ರಫ್ತು ಮಾಡಲು ಅವಕಾಶ ನೀಡದಿರಲು ಈ ಹಿಂದೆ ನಿರ್ಧರಿಸಿತ್ತು. ಇದರಿಂದಾಗಿ ವಿದೇಶಿ ಮಾರಾದಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಮಿಲ್ ಗಳು ಮತ್ತು ವ್ಯಾಪಾರಿಗಳು ದೂರಿದ್ದಾರೆ. ಹೀಗಾಗಿ ಬೆಲೆ ತಗ್ಗಿಸುವ ನಿರ್ಧಾರಕ್ಕೆ ಸರ್ಕಾರ ಬರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಫ್ತು ಇಳಿಕೆಯಿಂದ ಹಣ ಕಳೆದುಕೊಳ್ಳುತ್ತಿರುವ ರೈತರಿಗೆ ಇದರಿಂದ ನೆರವಾಗಲಿದೆ. ಜಾಗತಿಕ ಬಾಸ್ಮತಿ ಅಕ್ಕಿ ಮಾರುಕಟ್ಟೆಯಲ್ಲಿ ಭಾರತವು ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ಸಹ ಅನುಕೂಲ ಆಗಲಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ ಪ್ರೇಮ್ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದು ಭಯಾನಕ ವೈರಸ್ ಎದುರಿಸಲು ಸಜ್ಜಾಗಿ; ಚೀನಾ ವೈರಾಲಜಿಸ್ಟ್ ಎಚ್ಚರಿಕೆ!
‘ಎಲೋನ್ ಮಸ್ಕ್’ ಜೀವನಚರಿತ್ರೆ ಪುಸ್ತಕ ಬಿಡುಗಡೆ: ಮೊದಲ ವಾರದಲ್ಲೇ ದಾಖಲೆಯ ಮಾರಾಟ!