Monday, August 8, 2022

ಕ್ರೀಡಾಪಟುಗಳಿಗಾಗಿ ಬರಲಿದೆ ಬ್ಯಾಟರಿಚಾಲಿತ ‘ಮೋಕ್ಷ’ ಮಾಸ್ಕ್

Follow Us

newsics.com
ನವದೆಹಲಿ: ಕ್ರೀಡಾಪಟುಗಳಿಗೆ ತರಬೇತಿ ವೇಳೆ ಕೊರೋನಾ ಸೋಂಕಿನಿಂದ ಪಾರಾಗಲು ಖರಗ್‌ಪುರ ಐಐಟಿಯ ಹಳೆ ವಿದ್ಯಾರ್ಥಿಯೊಬ್ಬರು ಬ್ಯಾಟರಿಚಾಲಿತ ಮಾಸ್ಕ್ ರೂಪಿಸಿದ್ದಾರೆ.
ಬ್ಯಾಟರಿಚಾಲಿತ ಮಾಸ್ಕ್‌ನ ಹೆಸರು ‘ಮೋಕ್ಷ’. ಇದರ ಬೆಲೆ 2,200 ರೂ.ಗಳಾಗಿದೆ. ಈ ಮಾಸ್ಕ್ ಧರಿಸುವ ಕ್ರೀಡಾಪಟುಗಳಿಗೆ ಹೆಚ್ಚಿನ ಅಮ್ಲಜನಕ ದೊರೆಯಲಿದ್ದು, ಒಲಿಂಪಿಕ್‌ಗೆ ಆಯ್ಕೆಯಾಗಿರುವ ಭಾರತದ ಕ್ರೀಡಾಪಟುಗಳಿಗೆ ಈ ಮಾಸ್ಕ್ ನೀಡಲು ಭಾರತೀಯ ಒಲಿಂಪಿಕ್ ಸಂಘಟನೆ (ಐಒಎ) ನಿರ್ಧರಿಸಿದೆ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.
ಈ ಸಂಬಂಧ ಐಒಎ, ಐಐಟಿ ಖರಗ್‌ಪುರದ ಹಳೆ ವಿದ್ಯಾರ್ಥಿ ಪಿಯುಷ್ ಅಗರ್ವಾಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರ ಪಿಕ್ಯೂಆರ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕ್ರೀಡಾಪಟುಗಳಿಗೆ ಮಾಸ್ಕ್‌ ಪೂರೈಸಲಿದೆ.
‘ಕವಾಚ್ ಮಾಸ್ಕ್ ಪ್ರಾಜೆಕ್ಟ್’ ಯೋಜನೆಯಡಿ ಸರ್ಕಾರ ಮಾಸ್ಕ್ ತಯಾರಿಕೆಗೆ ನೆರವು ನೀಡಲಿದೆ. ಈ ಮೊದಲು ಮಾಲಿನ್ಯದ ಸಮಸ್ಯೆಯಿಂದ ಪಾರಾಗಲು ಉಪಯುಕ್ತವಾದ ಮಾಸ್ಕ್ ತಯಾರಿಸಿದ್ದರು. ಇದನ್ನು ಧರಿಸಿದ ಕ್ರೀಡಾಪಟುಗಳಿಗೆ ಉಸಿರಾಟದ ಸಮಸ್ಯೆ ಕಂಡುಬರದಿದ್ದರೆ ಎಲ್ಲಾ ಒಲಿಂಪಿಕ್-ಬೌಂಡ್ ಕ್ರೀಡಾಪಟುಗಳು ಮತ್ತು ಇತರ ಅಥ್ಲೀಟ್‌ಗಳಿಗೆ ಈ ಮಾಸ್ಕ್ ಬಳಸಲು ಅವಕಾಶ ನೀಡಲಾಗುವುದು ಎಂದು ರಾಜೀವ್ ಮೆಹ್ತಾ ತಿಳಿಸಿದ್ದಾರೆ. 1,000 ಮಾಸ್ಕ್‌ಗಳ ಪೂರೈಕೆಗೆ ಆದೇಶ ನೀಡಿದ್ದೇವೆ. ಆರಂಭಿಕ ಹಂತದಲ್ಲಿ 10-15 ಕ್ರೀಡಾಪಟುಗಳು ಬ್ಯಾಟರಿಚಾಲಿತ ಮಾಸ್ಕ್ ಧರಿಸಿ ತರಬೇತಿ ಪಡೆಯಲಿದ್ದಾರೆ ಎಂದು ಮೆಹ್ತಾ ತಿಳಿಸಿದ್ದಾರೆ.

ಕೊರೋನಾ ಸಮಯ, ಹೃದಯಕ್ಕೆ ಬೇಕು ಅತಿ ಕಾಳಜಿ

ಪುರಿ ಜಗನ್ನಾಥ ಮಂದಿರದ 351 ಸೇವಕರು, 53 ಸಿಬ್ಬಂದಿಗೆ ಕೊರೋನಾ, ಮೂವರ ಸಾವು

ಮತ್ತಷ್ಟು ಸುದ್ದಿಗಳು

vertical

Latest News

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು...

ಏಳು ವರ್ಷದ ಮಗುವಿನಲ್ಲಿ ಮಂಕಿ ಫಾಕ್ಸ್ ರೋಗ ಲಕ್ಷಣ ಪತ್ತೆ

newsics.com ತಿರುವನಂತಪುರಂ: ಕೇರಳದಲ್ಲಿ ಏಳು ವರ್ಷದ ಮಗುವಿನಲ್ಲಿ  ಮಂಕಿ ಫಾಕ್ಸ್ ರೋಗದ ಲಕ್ಷಣ ಕಂಡು ಬಂದಿದೆ. ಇದೀಗ ಸ್ಯಾಂಪಲ್ ನ್ನು  ಉನ್ನತ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಮಗುವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ  ದಾಖಲಿಸಲಾಗಿದ್ದು,  ಚಿಕಿತ್ಸೆ ಮುಂದುವರಿದಿದೆ ಬ್ರಿಟನ್ ನಿಂದ...

ಜಮ್ಮು ಕಾಶ್ಮೀರದ ಹಲವೆಡೆ ಎನ್ ಐ ಎ ದಾಳಿ

newsics.com ಶ್ರೀನಗರ: ಭಯೋತ್ಪಾದಕ ಸಂಘಟನೆಗಳಿಗೆ ಕೆಲವು ವ್ಯಕ್ತಿಗಳು  ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಹಲವೆಡೆ ಎನ್ ಐ ಎ ದಾಳಿ ನಡೆಸಿದೆ. ಸ್ಥಳೀಯರು ಈ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಶಂಕಿಸಲಾಗಿದೆ. ಈ...
- Advertisement -
error: Content is protected !!