newsics.com
ತಿರುವನಂತಪುರಂ: ಗುಜರಾತ್ ಗಲಭೆ ಕುರಿತಂತೆ ಬಿಬಿಸಿ ಸಿದ್ದಪಡಿಸಿರುವ ಸಾಕ್ಷ್ಯ ಚಿತ್ರ ಇದೀಗ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಬಿಬಿಸಿ ಸಾಕ್ಷ್ಯ ಚಿತ್ರ ವಿರೋಧಿಸಿ ಟ್ವೀಟ್ ಮಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಎ ಕೆ ಆ್ಯಂಟನಿ ಪುತ್ರ ಅನಿಲ್ ಕೆ ಆ್ಯಂಟನಿ ಇದೀಗ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದೇನೆ ಎಂದು ಅವರು ಘೋಷಿಸಿದ್ದಾರೆ.
ಅನಿಲ್ ಕೆ ಆ್ಯಂಟನಿ ಕೇರಳದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲ ತಾಣದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.
ಬಿಜೆಪಿ ಜತೆ ವಿಚಾರಧಾರೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಇದೆ. ಆದರೆ ದೇಶದ ಸಾರ್ವ ಭೌಮತ್ವದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅನಿಲ್ ಕೆ ಆ್ಯಂಟನಿ ಹೇಳಿದ್ದರು. ಇದು ಕಾಂಗ್ರೆಸ್ ನ ಒಂದು ಬಣದ ಕೆಂಗಣ್ಣಿಗೆ ಕಾರಣವಾಗಿತ್ತು.