Saturday, April 17, 2021

ದೇಶದಲ್ಲೇ ಬೆಂಗಳೂರು ಬೆಸ್ಟ್ ವಾಸಯೋಗ್ಯ ನಗರ- ಕೇಂದ್ರ ಸರ್ಕಾರದ ಸಮೀಕ್ಷೆ

newsics.com
ನವದೆಹಲಿ: ಕೇಂದ್ರ ಸರ್ಕಾರ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020 (ಇಒಎಲ್‌ಐ) ಸಮೀಕ್ಷೆಯಲ್ಲಿ ಬೆಂಗಳೂರು ಅತ್ಯುತ್ತಮ ನಗರವಾಗಿ ಹೊರಹೊಮ್ಮಿದೆ.
ಈ ಪಟ್ಟಿಯಲ್ಲಿ ಪುಣೆ ಎರಡನೇ ಸ್ಥಾನ ಪಡೆದರೆ, 111 ಇತರ ನಗರಗಳಲ್ಲಿ ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ. ‘ಮಿಲಿಯನ್ + ವಿಭಾಗದಲ್ಲಿ (ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ) ಬೆಂಗಳೂರು ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದು, ನಂತರದ ಸ್ಥಾನವನ್ನು ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವೀ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್ ಮತ್ತು ಗ್ರೇಟರ್ ಮುಂಬೈ ಸ್ಥಾನ ಪಡೆದುಕೊಂಡಿವೆ.
‘ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆ’ ಇರುವ ನಗರಗಳ ವಿಭಾಗದಲ್ಲಿ, ಶಿಮ್ಲಾ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭುವನೇಶ್ವರ, ಸಿಲ್ವಾಸ್ಸ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ಗುರುಗ್ರಾಮ್, ದಾವಣಗೆರೆ ಮತ್ತು ತಿರುಚಿರಾಪಳ್ಳಿ ಸ್ಥಾನ ಪಡೆದುಕೊಂಡಿವೆ.
ಒಂದು ದಶಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮತ್ತು ಒಂದು ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020ರ ಶ್ರೇಯಾಂಕಗಳನ್ನು ಘೋಷಿಸಲಾಗಿದ್ದು, 2020ರಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಒಟ್ಟು 111 ನಗರಗಳು ಈ ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದವು.

ಕನ್ನಾ – ಪೆಂಚ್ ಹುಲಿ ರಕ್ಷಿತಾರಾಣ್ಯದಲ್ಲಿ ಮಹಿಳಾ ಮಾರ್ಗದರ್ಶಕಿಯರು

ನಕ್ಸಲೀಯರಿಂದ ನೆಲಬಾಂಬ್ ಸ್ಫೋಟ: ಹುತಾತ್ಮರಾದ ಮೂವರು ಯೋಧರು

ಮ್ಯಾನ್ಮಾರ್ ನಲ್ಲಿ ಹಿಂಸಾಚಾರ: 38 ಪ್ರತಿಭಟನಾಕಾರರ ಸಾವು

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!