ಹೈದರಾಬಾದ್: ಮಾರಕ ಕೊರೋನಾ ತ಼ಡೆಗಟ್ಟುವ ಲಸಿಕೆ ಅಭಿವೃದ್ದಿಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹೇಳಿದೆ. ಸಾಮಾಜಿಕ ಜಾಲ ತಾಣದಲ್ಲಿ ಭಾರತ್ ಬಯೋಟೆಕ್ ಈ ಕುರಿತ ಮಾಹಿತಿ ಹಂಚಿಕೊಂಡಿದೆ.
ಪ್ರಾಣಿಗಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಸಂಸ್ಥೆ ಬಹಿರಂಗಪಡಿಸಿದೆ. ಪರೀಕ್ಷೆಯ ಎಲ್ಲ ಹಂತಗಳಲ್ಲಿ ಧನಾತ್ಮಕ ಫಲಿತಾಂಶ ದೊರೆತಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
ದೇಶದಲ್ಲಿ ಪ್ರಮುಖವಾಗಿ ಮೂರು ಸಂಶೋಧನಾ ಸಂಸ್ಥೆಗಳು ಕೊವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ನಿರತವಾಗಿವೆ.