ನವದೆಹಲಿ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಭಾರತ ಮತ್ತು ಬಾಂಗ್ಲಾ ದೇಶ ಪ್ರಶಸ್ತಿಗಾಗಿ ಸೆಣಸಲಿವೆ. ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ನಾಯಕ ಯಶಸ್ವಿ ಜೈಸ್ವಾಲ್ ತಂದೆ ಭೂ ಪೇಂದ್ರ ಜೈಸ್ವಾಲ್ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. ಗೆದ್ದು ಬನ್ನಿ ಎಂದು ಹರಸಿದ್ದಾರೆ. ಯಶಸ್ವಿ ಪಾಕ್ ವಿರುದ್ದದ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಭೂ ಪೇಂದ್ರ ಜೈಸ್ವಾಲ್ ಪಾನ್ ಪುರಿ ಮಾರಿ, ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ಹಲವು ಅಡೆ ತಡೆ ಎದುರಿಸಿ ತಮ್ಮ ಪುತ್ರನ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸನ್ನು ನನಸು ಮಾಡಿದ ಸಾಧಕರಾಗಿದ್ದಾರೆ