newsics.com
ಮುಂಬೈ: ಬಿಹಾರ ಮೂಲದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ಬಿಹಾರ ಮೂಲದ ಇನ್ನೋರ್ವ ನಟ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದಯೋನ್ಮುಖ ನಟ ಅಕ್ಷತ್ ಉತ್ಕರ್ಷ್ (26) ಮುಂಬೈನ ತಮ್ಮ ಫ್ಲಾಟಿನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದೆ ಎಂದು ಅಂಬೋಲಿ ಠಾಣಾ ಪೊಲೀಸರು ಹೇಳಿದ್ದಾರೆ.
ಅಕ್ಷತ್ ಅವರು ಒಂದೆರಡು ಭೋಜ್‌ಪುರಿ ಚಲನಚಿತ್ರಗಳಲ್ಲಿ ಮತ್ತು ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿನ ಅವಕಾಶಗಳೊಂದಿಗೆ ಅವರು ಮುಂಬೈಗೆ ಸ್ಥಳಾಂತರಗೊಂಡಿದ್ದರು. ಆದರೆ, ಸರಿಯಾದ ಅವಕಾಶ ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸಿದ್ದಾರೆ. ಶವವನ್ನು ಮುಜಾಫರ್ ನಗರಕ್ಕೆ ಕೊಂಡೊಯ್ಯಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೂರು ಗಂಟೆಗಳ ಮೊದಲು ಅಕ್ಷತ್ ಮನೆಯವರ ಜತೆ ಫೋನ್‌ನಲ್ಲಿ ಮಾತನಾಡಿದ್ದ. ಮಾತಿನಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ, ನಾರ್ಮಲ್ ಆಗಿದ್ದ ಎಂದು ಅವರ ತಂದೆ ರಾಜು ಚೌಧರಿ ಹೇಳಿದ್ದಾರೆ. ನನ್ನೊಂದಿಗೂ ರಾತ್ರಿ ಊಟ ಮಾಡುವವರೆಗೂ ಫೋನ್, ಚಾಟ್’ನಲ್ಲಿ ನಿರತನಾಗಿದ್ದ. ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಅಂಧೇರಿಯ ರೂಮ್’ನಲ್ಲಿದ್ದ ಅಕ್ಷತ್ ಉತ್ಕರ್ಷ್ ಗೆಳತಿ ಹೇಳಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ ನೀಡಲು ಸುಪ್ರೀಂ ಸೂಚನೆ
ಗ್ಯಾಸ್ ಟ್ಯಾಂಕರ್ ಡಿಕ್ಕಿ; ಸ್ಥಳದಲ್ಲೇ ತಂದೆ, ಮಗಳು ಸಾವು