♦ ನಟ ಸುಶಾಂತ್ ಸಾವು; ಬಿಹಾರ್- ಮಹಾ ಪೊಲೀಸರ ನಡುವೆ ತಿಕ್ಕಾಟ
ಪಾಟ್ನಾ: ನಮ್ಮ ಪೊಲೀಸ್ ಅಧಿಕಾರಿಗೆ ತಕ್ಷಣ ಹಿಂತಿರುಗಲು ಬಿಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಹಾರ ಡಿಜಿಪಿ ಮಹಾರಾಷ್ಟ್ರ ಪೊಲೀಸ್ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕುರಿತ ತನಿಖೆ ನಡೆಸಲು ಮುಂಬೈಗೆ ತೆರಳಿರುವ ಬಿಹಾರದ ಅಧಿಕಾರಿಗೆ ದಿಗ್ಬಂಧನ ಹಾಕಿರುವ ಹಿನ್ನೆಲೆಯಲ್ಲಿ ಬಿಹಾರ್ ಡಿಜಿಪಿ ಗುಪ್ತೇಶ್ವರ್ ಪಾಂಡೆ ಈ ಎಚ್ಚರಿಕೆ ನೀಡಿದ್ದಾರೆ.
ಮುಂಬೈ ಪೊಲೀಸರ ವರ್ತನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಡಿಜಿಪಿ ಗುಪ್ತೇಶ್ವರ್ ಪಾಂಡೆ, ಒತ್ತಾಯಪೂರ್ವಕ ಕ್ವಾರಂಟೈನ್’ನಿಂದ ಬಿಹಾರದ ಐಪಿಎಸ್ ಅಧಿಕಾರಿ, ಪಾಟ್ನಾ ಸಿಟಿ (ಈಸ್ಟ್)ನ ಎಸ್ ಪಿ ವಿನಯ್ ತಿವಾರಿ ಅವರನ್ನು ಬಿಡದಿದ್ದಲ್ಲಿ ಕೋರ್ಟ್ ಮೊರೆ ಹೋಗಬೇಕಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂಬಂಧ ರಾಜ್ಯದ ಅಡ್ವೊಕೇಟ್ ಜನರಲ್ ಅವರನ್ನು ಈ ವಿಷಯವಾಗಿ ಸಂಪರ್ಕಿಸಿ ಕೋರ್ಟ್ ಮೊರೆ ಹೋಗಲಾಗುವುದು ಎಂದಿದ್ದಾರೆ.
ಸುಶಾಂತ್ ಸಿಂಗ್ ಸಾವು; ರಿಯಾ ಚಕ್ರವರ್ತಿಗೆ ಸಿಬಿಐ, ಇಡಿ ಬಲೆ
ಇದೊಂದು ಗೃಹಬಂಧನ. ನಮ್ಮ ಅಧಿಕಾರಿ ಮುಂಬೈಗೆ ತೆರಳಿ ಲಿಖಿತ ಮನವಿ ಸಲ್ಲಿಸಿದ್ದರು. ನಾನೂ ಮುಂಬೈ ಡಿಜಿಪಿಗೆ ಎಸ್‌ಎಂಎಸ್ ಮೂಲಕ ವಿನಯ್ ತಿವಾರಿ ಮೂರು ದಿನಗಳು ತನಿಖೆಗಾಗಿ ಮುಂಬೈನಲ್ಲಿರಲಿದ್ದಾರೆ ಎಂದು ತಿಳಿಸಿದ್ದೆ ಎಂದು ಪಾಂಡೆ ತಿಳಿಸಿದ್ದಾರೆ.