ನವದೆಹಲಿ: ಕೊರೋನಾದ ಮಧ್ಯೆ ಬಿಹಾರ ಚುನಾವಣೆಗೆ ಚುನಾವಣಾ ಆಯೋಗ ಸಜ್ಜಾಗಿದೆ. ಇಂದು ಚುನಾವಣಾ ಆಯೋಗದ ಸಭೆ ನಡೆಯಲಿದ್ದು, ಬಿಹಾರ ಚುನಾವಣಾ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಕಳೆದ ಎರಡು ವಾರಗಳಿಂದ ಬಿಹಾರದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕಾಮಗಾರಿಗಳಿಗೆ ವೀಡಿಯೋ ಸಂವಾದದ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ್ದರು.
ಇಂದು ಚುನಾವಣಾ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಹೊಸ ಯೋಜನೆ ಪ್ರಕಟಣೆ ಮೇಲೆ ನಿರ್ಬಂಧ ಜಾರಿಯಾಗಲಿದೆ. ಇದರ ಜತೆ ಜತೆಗೆ ಹಲವು ರಾಜ್ಯಗಳ ವಿಧಾನಸಭಾ ಉಪ ಚುನಾವಣೆಯ ದಿನಾಂಕ ಕೂಡ ಇಂದೇ ಪ್ರಕಟವಾಗುವ ಸಾಧ್ಯತೆಯಿದೆ.