Thursday, December 8, 2022

ಡ್ರೋನ್ ಆರ್ಡರ್ ಮಾಡಿದವನಿಗೆ ಬಂತು ಒಂದು ಕೆಜಿ ಆಲೂಗಡ್ಡೆ

Follow Us

newsics.com

ಬಿಹಾರ: ಆನ್‌ಲೈನ್‌ನಲ್ಲಿ ಡ್ರೋನ್‌ ಕ್ಯಾಮರಾ ಖರೀದಿಗೆ ಮುಂದಾದ ವ್ಯಕ್ತಿಗೆ ಒಂದು ಕೆಜಿ ಆಲೂಗಡ್ಡೆ ಬಂದಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. 

ಬಿಹಾರದ ನಲಂದಾ ಜಿಲ್ಲೆಯ ಪರ್ವಾಲ್‌ಪುರದ ಚೇತನ್ ಕುಮಾರ್ ಆನ್‌ಮೈನ್ ವೆಬ್‌ಸೈಟ್‌ವೊಂದರಲ್ಲಿ ಡ್ರೋನ್ ಕ್ಯಾಮರಾ ಬುಕ್ ಮಾಡಿ, ಸಂಪೂರ್ಣ ನಗದನ್ನು ಆನ್‌ಲೈನ್‌ನಲ್ಲೇ ಪಾವತಿ ಮಾಡಿದ್ದರು. ನಂತರ ಡೆಲಿವರಿ ಏಜೆಂಟ್  ಇವರಿಗೆ ಕ್ಯಾಮರಾ ಪಾರ್ಸೆಲ್ ನೀಡಿದ್ದಾರೆ.

ಈ ಪಾರ್ಸೆಲ್ ನೋಡಿದ ಕೂಡಲೇ ಚೇತನ್ ಅವರಿಗೆ ಸಂಶಯ ಬಂದಿದ್ದು, ಆತನ ಕೈಯಲ್ಲೇ ಈ ಪಾರ್ಸೆಲ್ ಬಾಕ್ಸ್ ಅನ್ನು ಒಪನ್ ಮಾಡಲು ಹೇಳಿದ್ದಾರೆ. ಅಲ್ಲದೇ ಡೆಲಿವರಿ ಬಾಯ್ ಪಾರ್ಸೆಲ್ ಒಪನ್ ಮಾಡುತ್ತಿರುವ ದೃಶ್ಯವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ಸೀಲ್‌ ಆಗಿದ್ದ ಬಾಕ್ಸ್ ಒಳಗೆ ಹತ್ತಿಪ್ಪತ್ತು ಆಲೂಗಡ್ಡೆ ಇರುವುದು ಕಾಣಿಸಿದೆ. 

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಪತ್ತೆ

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!