newsics.com
ಬಿಹಾರ: ಕೊಲೆ ಅಪರಾಧಿಯೊಬ್ಬ ಜೈಲಿನಲ್ಲೇ ಇದ್ದು, ರಾಮಚರಿತಮಾನಸ ಮಹಾಕಾವ್ಯವನ್ನು ‘ಆಂಗಿಕ’ ಭಾಷೆಗೆ ಅನುವಾದಿಸಿದ್ದಾನೆ.
ಆಂಗಿಕ ಭಾಷೆ ಬಿಹಾರ ರಾಜ್ಯದ ಭಾಗಲ್ಪುರ, ಮುಂಗೇರ್ ಮತ್ತು ಬಂಕಾ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ.
ಬಿಹಾರದ ಭಾಗಲ್ಪುರ ಕೇಂದ್ರ ಕಾರಾಗೃಹದಲ್ಲಿರುವ ಮುಂಗೇರ್ ಜಿಲ್ಲೆಯವರೇ ಆಗಿರುವ ಹರಿಹರ ಪ್ರಸಾದ್ ಅವರು ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದು, ಜೈಲುವಾಸದಲ್ಲಿರುವ ಅವರು, ರಾಮಚರಿತಮಾನಸ ಮಹಾಕಾವ್ಯವನ್ನು ‘ಆಂಗಿಕ’ ಭಾಷೆಗೆ ಅನುವಾದಿಸಿದ್ದಾರೆ.
ರಾಮಚರಿತಮಾನಸ ಮಹಾಕಾವ್ಯದ ಅನುವಾದವನ್ನು ಹರಿಹರ ಪ್ರಸಾದ್ ಅವರು ಪೂರ್ಣಗೊಳಿಸಿದ್ದು, ಮಹಾಕಾವ್ಯದ ಅನುವಾದಿತ ಕೃತಿಯ ಪ್ರೂಫ್ ರೀಡಿಂಗ್ ಅನ್ನು ಜೈಲರ್ ಮನೋಜ್ ಕುಮಾರ್ ಮಾಡುತ್ತಿದ್ದಾರೆ.
PSI ಹಗರಣ- ಸಿಐಡಿ ತನಿಖಾಧಿಕಾರಿಗೆ ₹ 76 ಲಕ್ಷ ಲಂಚ ಕೊಟ್ಟಿದ್ದೇನೆಂದ RD ಪಾಟೀಲ!