Wednesday, October 5, 2022

ಸಂಜೆ 4ಗಂಟೆಗೆ ಬಿಹಾರದ ಮೊದಲ ಫಲಿತಾಂಶ ಪ್ರಕಟ ಸಂಭವ

Follow Us

Newsics.com

ಪಾಟ್ನ: ಬಿಹಾರದಲ್ಲಿ ಮಧ್ಯಾಹ್ನ ಒಂದು ಗಂಟೆ ತನಕ ಒಂದು ಕೋಟಿ ಮತಗಳ ಎಣಿಕೆ ಮಾತ್ರ ಮುಗಿದಿದೆ. ಇನ್ನೂ ಎರಡು ಕೋಟಿಗೂ ಹೆಚ್ಚು ಮತಗಳ ಎಣಿಕೆ ಮಾಡಬೇಕಾಗಿದೆ. ಕೊರೋನಾ ಮಾರ್ಗ ಸೂಚಿಯಿಂದಾಗಿ ಮತ ಎಣಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.

ಸಂಜೆ 4 ಗಂಟೆಗೆ ಬಿಹಾರ ವಿಧನಸಭೆಯ ಮೊದಲ ಫಲಿತಾಂಶ ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚಿಗಿನ ಮಾಹಿತಿ ಪ್ರಕಾರ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಮುನ್ನಡೆಯಲ್ಲಿದೆ. ಎನ್ ಡಿ ಎ ಮೈತ್ರಿಕೂಟ 127 ಮತ್ತು ಆರ್ ಜೆ ಡಿ ನೇತೃತ್ವದ ಮಹಾ ಮೈತ್ರಿ  105 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಮತ್ತು ಎರಡನೆ ಅಭ್ಯರ್ಥಿ ಮಧ್ಯೆ  ಅಲ್ಪ ಅಂತರ ಇದೆ. 166  ವಿಧಾನಸಭಾ ಕ್ಷೇತ್ರಗಳಲ್ಲಿ  ಲೀಡ್ ಅಂತರ 5000 ಮತಗಳಾಗಿವೆ. 123 ಕ್ಷೇತ್ರಗಳಲ್ಲಿ ಎರಡು ಅಭ್ಯರ್ಥಿಗಳ ಮಧ್ಯೆ  ಮತಗಳ ಅಂತರ 3000ಕ್ಕಿಂತ ಕಡಿಮೆ ಇದೆ. 80 ಕ್ಷೇತ್ರಗಳಲ್ಲಿ ಇದು 2000ಕ್ಕಿಂತ ಕಡಿಮೆ. 49 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳ ಅಂತರ 100ಕ್ಕಿಂತ ಕಡಿಮೆಯಾಗಿದ್ದು, ಯಾವುದೇ ಸುತ್ತಿನಲ್ಲಿ ಅಚ್ಚರಿಯ ಫಲಿತಾಂಶ ಬರುವ ಸಾಧ್ಯತೆಯಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ; ನಗರದಲ್ಲಿ ಬಿಗಿ ಭದ್ರತೆ

newsics.com ಮೈಸೂರು; ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಸುತ್ತಮುತ್ತ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು,ನಿಯೋಜಿಸಲಾಗಿದೆ. ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!