ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿರಿಯಾನಿ ವ್ಯಾಪಾರ ಜೋರಾಗಿದೆ.
ಮಂಗಳವಾರ ಎಎಪಿ ಗೆಲುವು ಸನಿಹವಾಗುತ್ತಲೇ ದೆಹಲಿಯ ಹೋಟೆಲ್‌ಗಳಲ್ಲಿ ಬಿರಿಯಾನಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು ಎಂದು ಕೆಲವು ಹೋಟೆಲ್‌ಗಳ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಲವು ಹೋಟೆಲ್‌ಗಳು ಬಿರಿಯಾನಿ ಮೇಲೆ ರಿಯಾಯಿತಿಯನ್ನೂ ಘೋಷಿಸಿ ಒಳ್ಳೆಯ ವ್ಯಾಪಾರ ಮಾಡಿದವು ಎಂದೂ ಅವರು ಹೇಳಿದ್ದಾರೆ. ದೆಹಲಿ ಚುನಾವಣೆ ಸಮಯದಲ್ಲಿ ‘ಬಿರಿಯಾನಿ’ ಚರ್ಚೆಯ ವಿಷಯವಾಗಿತ್ತು.
ದೆಹಲಿ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ, ‘ಎಎಪಿಯು ಶಾಹೀನ್ ಬಾಗ್ ಪ್ರತಿಭಟನಾಕಾರರಿಗೆ ಬಿರಿಯಾನಿ ಹಂಚುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದರು.
ದೆಹಲಿಯಲ್ಲಿ ಬಿರಿಯಾನಿ ವ್ಯಾಪಾರ ಬಲು ಜೋರು!
Follow Us