newsics.com
ಕೊಚ್ಚಿ: ಕೇರಳದ ಕೊಚ್ಚಿ ಮಹಾನಗರ ಪಾಲಿಕೆಯ ಬಿಜೆಪಿ ಕಾರ್ಪೋರೇಟರ್ ಮಿನಿ ಆರ್ ಮೆನನ್ (42) ನಿಧನಹೊಂದಿದ್ದಾರೆ.
ಕಳೆದ ಒಂದು ವರ್ಷದಿಂದ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಬಳಿಕ ಅವರಲ್ಲಿ ಕ್ಯಾನ್ಸರ್ ರೋಗದ ಲಕ್ಷಣ ಪತ್ತೆಯಾಗಿತ್ತು.
ಕಳೆದ ಚುನಾವಣೆಯಲ್ಲಿ ಮಿನಿ ಮೆನನ್ ತಮ್ಮ ಪ್ರತಿಸ್ಪರ್ಧಿಯನ್ನು 271 ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದ್ದರು. ಮಿನಿ ಮೆನನ್ ನಿಧನಕ್ಕೆ ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರನ್ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ