newsics.com
ಮಹಾರಾಷ್ಟ್ರ : ಕೋವಿಡ್ 19 ಸೋಂಕಿಗೆ ಒಳಗಾದ ಬಳಿಕವೂ ತಮ್ಮ ಬೆಂಬಲಿಗರನ್ನು ಭೇಟಿ ಮಾಡುವ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ನಾಯಕ ತಜಿಂದ್ರ್ ಸಿಂಗ್ ಬಗ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬುಧವಾರದಂದು ಉದ್ಧವ್ ಠಾಕ್ರೆ ಕೋವಿಡ್ ಪಾಸಿಟಿವ್ ವರದಿಯನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ತಡರಾತ್ರಿ ಸಿಎಂ ಅಧಿಕೃತ ನಿವಾಸದಿಂದ ಠಾಕ್ರೆ ನಿರ್ಗಮಿಸುವ ಮುನ್ನ ಶಾಸಕರು, ಸಂಸದರು ಹಾಗೂ ಬೆಂಬಲಿಗರನ್ನು ಉದ್ಧವ್ ಠಾಕ್ರೆ ಭೇಟಿ ಯಾಗಿದ್ದಾರೆ .