newsics.com
ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಮಾಲ್ವಾನ್ ತರ್ಕರ್ಲಿ ಬೀಚ್ ನಲ್ಲಿ ಪ್ರವಾಸಿಗರು ಸ್ಕೂಬಾ ಡೈವಿಂಗ್ ತೆರಳುತ್ತಿದ್ದ ವೇಳೆ ಭಾರೀ ಗಾಳಿಯಿಂದಾಗಿ ದೋಣಿ ನೀರಿನಲ್ಲಿ ಮುಳುಗಿದ್ದು ಅವಘಡ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು 18 ಪ್ರವಾಸಿಗರನ್ನು ರಕ್ಷಿಸಿದ್ದು, ಅದರಲ್ಲಿ 14 ಪ್ರವಾಸಿಗರು ಸುರಕ್ಷಿತರಾಗಿದ್ದಾರೆ.
ಭಾರೀ ಮಳೆಯಿಂದಾಗಿ ಸ್ಕೂಬಾ ಡೈವಿಂಗ್ ನಿಷೇಧಿಸಲಾಗಿದ್ದು, ಆದರೂ ಪ್ರಯಾಣಿಕರನ್ನು ಕರೆದೊಯ್ದ ದೋಣಿ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.