newsics.com
ನವದೆಹಲಿ: ‘ಗುಲಾಬೊ ಸೀತಾಬೊ’ದಲ್ಲಿ ಅಮಿತಾಬ್ ಬಚ್ಚನ್ ಜತೆ ನಟಿಸಿದ್ದ ಬಾಲಿವುಡ್ ನಟಿ ಫಾರೂಖ್ ಜಾಫರ್(88) ಶುಕ್ರವಾರ ಸಂಜೆ ಲಕ್ನೋದಲ್ಲಿ ನಿಧನರಾದರು.
ಫಾರೂಖ್ ಮೊಮ್ಮಗ ಶಾಝ್ ಅಹ್ಮದ್ ಟ್ವಿಟ್ಟರ್ ನಲ್ಲಿ ಈ ಮಾಹಿತಿ ನೀಡಿದ್ದಾರೆ. ಫಾರೂಖ್ ಜಾಫರ್ 1933 ರಲ್ಲಿ ಜೌಂದಪುರದಲ್ಲಿ ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದರು. ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸೈಯದ್ ಮುಹಮ್ಮದ್ ಜಾಫರ್ ಅವರನ್ನು ಮದುವೆಯಾದ ನಂತರ ಅವರು 16ನೇ ವಯಸ್ಸಿನಲ್ಲಿ ಲಕ್ನೋಗೆ ತೆರಳಿದ್ದರು. ಪತಿಯ ಸಹಕಾರದಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.