ನವದೆಹಲಿ: ಚಿತ್ರ ನಿರ್ಮಾಪಕ ಹಾಗೂ ‘ಪ್ಯಾರ್ ತೂನೆ ಕ್ಯಾ ಕಿಯಾ’ ಹಾಗೂ ‘ರೋಡ್’ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ರಜತ್ ಮುಖರ್ಜಿ ಭಾನುವಾರ ಕೊನೆಯುಸಿರೆಳೆದರು.
ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜೈಪುರದಲ್ಲಿ ನಿಧನರಾದರು. ರಜತ್ ಮುಖರ್ಜಿ ಅವರು ಊರ್ಮಿಳಾ ಮಾತೋಂಡ್ಕರ್,ಫರ್ದೀನ್ ಖಾನ್, ಸೋನಾಲಿ ಕುಲಕರ್ಣಿ ಹಾಗೂ ರಾಜ್ಪಾಲ್ ಯಾದವ್ ಅಭಿನಯದ 2001ರಲ್ಲಿ ಬಿಡುಗಡೆಯಾಗಿರುವ ‘ಪ್ಯಾರ್ ತೂನೆ ಕ್ಯಾ ಕಿಯಾ’, 2004ರಲ್ಲಿ ‘ಲವ್ ಇನ್ ನೇಪಾಳ’ ಹಾಗೂ ‘ಇಶ್ಕ್ ಕಿಲ್ಸ್’ ಚಿತ್ರಗಳನ್ನು ನಿರ್ದೇಶಿಸಿದ್ದರು.
ಮುಖರ್ಜಿ ನಿಧನಕ್ಕೆ ನಟ ಮನೋಜ್ ಬಾಜ್ಪೇಯಿ, ನಿರ್ದೇಶಕ ಅನುಭವ್ ಸಿನ್ಹಾ ಹಾಗೂ ಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಸಹಿತ ಚಿತ್ರರಂಗದ ಹಲವಾರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ರಜತ್ ಮುಖರ್ಜಿ ಇನ್ನಿಲ್ಲ
Follow Us