newsics.com
ಒಡಿಶಾ: ಬಿಜೆಪಿ ಶಾಸಕ ಮೋಹನ್ ಚರಣ್ ಮಾಝಿ ಅವರ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿರುವ ಘಟನೆ ಒಡಿಶಾದ ಕಿಯೋಂಜರ್ ನಲ್ಲಿ ನಡೆದಿದೆ. 2 ಬಾಂಬ್ ಎಸೆಯಲಾಗಿದ್ದು, ಬಾಂಬ್ ದಾಳಿಯಲ್ಲಿ ಶಾಸಕ ಮಾಝಿ ಅವರು ಪಾರಾಗಿದ್ದಾರೆ.
ಅವರು ಕಾರ್ಮಿಕ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕಿಯೋಂಜರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡುವಾ ಎಂಬಲ್ಲಿ ದಾಳಿ ನಡೆದಿದೆ.
ಬಾಂಬ್ ಎಸೆತದಿಂದ ಮೋಹನ್ ಚರಣ್ ಮತ್ತು ಭದ್ರತಾ ಸಿಬ್ಬಂದಿ ಪಾರಾಗಿದ್ದು, ಕಾರು ಜಖಂಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಿಜೆಡಿ ಪಕ್ಷದ ನಾಯಕರು ಈ ದಾಳಿ ಮಾಡಿಸಿದ್ದಾರೆ ಎಂದು ಮೋಹನ್ ಚರಣ್ ಆರೋಪಿಸಿದ್ದು, ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.