ಮುಂಬೈ: ನಾನು ಐಷರಾಮಿ ಬದುಕಿಗೆ ಒಗ್ಗಿಹೋಗಿದ್ದೇನೆ. ಇದೀಗ ಪತಿ ನನಗೆ ವಿಚ್ಚೇಧನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಜೀವನ ಶೈಲಿ ಎಂದಿನಂತೆ ಇರಲು ಪ್ರತಿ ತಿಂಗಳು ಒಂದು ಕೋಟಿ 30 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಬೇಕು. ಇದು ಉದ್ಯಮಿಯೊಬ್ಬರ ಪತ್ನಿ ಪೂನಂ ಶ್ರೋಫ್ ಬಾಂಬೆ ಹೈಕೋರ್ಟ್ ಗೆ ಮಾಡಿದ ಮನವಿ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ ಗಢ್ಕರಿ ಈ ಮನವಿಯನ್ನು ತಳ್ಳಿಹಾಕಿದ್ದಾರೆ. ಪೂನಂ ಶ್ರೋಫ್ ಅವರು ಈ ಹಿಂದೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ 7 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಇದನ್ನು ಪೂನಂ ಅವರು ಮುಂಬೈ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.