ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ. ಗಡಿಯಲ್ಲಿನ ಚೀನಾ ಸೈನಿಕರ ಚಲನ ವಲನ ಮತ್ತು ಸೇನಾ ಜಮಾವಣೆ ಕುರಿತಂತೆ ರಾಜನಾಥ್ ಸಿಂಗ್ ಮಹತ್ವದ ಹೇಳಿಕೆ ನೀಡಲಿದ್ದಾರೆ.
ಚೀನಾದ ಸವಾಲು ಎದುರಿಸಲು ಭಾರತ ಕೂಡ ಸಜ್ಜಾಗಿದ್ದು, ಹೆಚ್ಚುವರಿ ಸೇನಾಪಡೆಗಳನ್ನು ಗಡಿಯಲ್ಲಿ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ತೆಗೆದುಕೊಂಡಿರುವ ಕ್ರಮಗಳ ಕುರಿತು ರಾಜನಾಥ್ ಸಿಂಗ್ ವಿವರಿಸಲಿದ್ದಾರೆ. ಬುಧವಾರ ರಾಜನಾಥ್ ಸಿಂಗ್ ಪ್ರತಿಪಕ್ಷ ನಾಯಕರ ಜತೆ ಈ ಸಂಬಂಧ ಚರ್ಚೆ ಕೂಡ ನಡೆಸಿದ್ದರು.
ರಾಜನಾಥ್ ಸಿಂಗ್ ಈಗಾಗಲೇ ಲೋಕಸಭೆಯಲ್ಲಿ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.