Saturday, April 17, 2021

ಗಡಿಯಲ್ಲಿ ಚೀನಾ ಉಪಟಳ: ಇಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ನವದೆಹಲಿ:  ಗಡಿ ತಂಟೆಕೋರ ಚೀನಾದ ಉಪಟಳ ನಿಯಂತ್ರಿಸುವ ಸಂಬಂಧ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸರ್ವಪಕ್ಷ ಸಭೆ ಇಂದು ಸಂಜೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಪ್ರಮುಖ ನಾಯಕರು ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿದೇಶಾಂಗ ಸಚಿವ ಜೈ ಶಂಕರ್ ಮತ್ತು ಹಿರಿಯ ಸೇನಾ ಅಧಿಕಾರಿಗಳು ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೇನಾ ಅಧಿಕಾರಿಗಳಿಂದ ವಿವರಣೆ

ಇಂದಿನ ಸರ್ವ ಪಕ್ಷ ಸಭೆಯಲ್ಲಿ ಹಿರಿಯ ಸೇನಾ ಅಧಿಕಾರಿಗಳು ಗಡಿಯಲ್ಲಿ ನಡೆದ ಘರ್ಷಣೆ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.   ಗಡಿಯಲ್ಲಿ ನಿಜವಾಗಿಯೂ ನಡೆದ್ದದ್ದು ಏನು.. ಯಾಕಾಗಿ ಭಾರತದ ಯೋಧರ ಬಳಿ ಶಸ್ತಾಸ್ತ್ರಗಳು ಇರಲಿಲ್ಲ. ಕಲ್ಲಿನಿಂದ ಪರಸ್ಪರ ಹೊಡೆದಾಡುವಂತಹ ಪರಿಸ್ಥಿತಿ ಯಾಕಾಗಿ ನಿರ್ಮಾಣವಾಯಿತು ಈ ಎಲ್ಲ ಅಂಶಗಳ ಕುರಿತು ಸೇನಾ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಪ್ರತಿಪಕ್ಷ ನಾಯಕರು ಈಗಾಗಲೇ ಹಲವು ಸಂಶಯಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಸಂಶಯ ಪರಿಹರಿಸುವ ಪ್ರಯತ್ನ ನಡೆಸಲಿದೆ.

ಅಂದು ವಾಜಪೇಯಿ ಇಂದು ಮೋದಿ

ಕಾರ್ಗಿಲ್ ನಲ್ಲಿ ಪಾಕಿಸ್ತಾನ ನಡೆಸಿದ ದುಸ್ಸಾಹಸದ ಹಿನ್ನೆಲೆಯಲ್ಲಿ  ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ವ ಪಕ್ಷ ಸಭೆ ಕರೆದಿದ್ದರು. ಪಾಕಿಸ್ತಾನ ಕೂಡ  ವಿಶ್ವಾಸ ದ್ರೋಹ ಎಸಗಿತ್ತು. ಅಂದು  ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಲಾಹೋರ್ ಗೆ ಬಸ್ ಯಾತ್ರೆ ಕೈಗೊಂಡಿದ್ದರು. ಉಭಯ ದೇಶಗಳ ಮಧ್ಯೆ  ಶಾಂತಿ ನೆಲೆಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಆದರೆ ಅಂದು ಸೇನೆಯ ನೇತೃತ್ವ ವಹಿಸಿದ್ದ  ಪರ್ವೇಜ್ ಮುಷರಪ್ ಇದಕ್ಕೆ ಅಪಸ್ವರ ಎತ್ತಿದ್ದರು.  ಭಾರತದ ನೆಲೆಗಳನ್ನು ವಶಪಡಿಸಿಕೊಳ್ಳಲು ಕಾರ್ಗಿಲ್ ನಲ್ಲಿ  ದುಸ್ಸಾಹಸ ನಡೆಸಿದ್ದರು. ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿ ದಿಗ್ವಿಜಯ ಸಾಧಿಸಿತ್ತು.

 ಭಾರತ ಮುಂದಿನ ದಾರಿ ಏನು

ಗಡಿಯಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಲು ಭಾರತ ಮೊದಲ ಆದ್ಯತೆ ನೀಡಲಿದೆ. ಇಂದಿನ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ಸಲಹೆ ಕೋರಲಿದ್ದಾರೆ. ಶಾಂತಿ ಪ್ರಸ್ತಾಪಕ್ಕೆ ಚೀನಾ ಸಮ್ಮತಿ ಸೂಚಿಸದಿದ್ದರೆ ಮುಂದಿನ ದಾರಿ ಏನು ಎಂಬ ಬಗ್ಗೆ ಅಭಿಪ್ರಾಯ ಕೋರಲಿದ್ದಾರೆ. ಮಾತುಕತೆಗೆ ಚೀನಾ ಬಗ್ಗದಿದ್ದರೆ ಲಡಾಕ್ ಪರಿಸರಕ್ಕೆ ಸೀಮಿತವಾಗಿ ಕಾರ್ಗಿಲ್ ಮಾದರಿಯ  ಸಂಘರ್ಘ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಇದು ಪೂರ್ಣ ಪ್ರಮಾಣದ ಯುದ್ದವಾಗಿ ಪರಿವರ್ತನೆಗೊಂಡರೆ ಅದರ ಪರಿಣಾಮ ಊಹಿಸಲು ಸಾಧ್ಯವಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!