newsics.com
ಗ್ವಾಲಿಯರ್: ಉತ್ತಮ ಡ್ಯಾನ್ಸರ್ ಆಗಬೇಕು ಎಂದು ಕನಸು ಕಂಡಿದ್ದ 16ರ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದೆ.
ಉತ್ತಮ ಡ್ಯಾನ್ಸ್ ರ್ ಆಗಲು ವಿಫಲನಾಗಿದ್ದಾನೆ. ಇದರಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರು ಕೂಡ ನನಗೆ ಬೆಂಬಲ ನೀಡಿಲ್ಲ ಎಂದು ಬಾಲಕ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ಇದರ ಜತೆಗೆ ಆಸೆಯೊಂದನ್ನು ಕೂಡ ವ್ಯಕ್ತಪಡಿಸಿದ್ದಾನೆ,
ನನ್ನ ನೆನಪಿಗಾಗಿ ಒಂದು ಮ್ಯೂಸಿಕ್ ವಿಡಿಯೋ ಸಿದ್ದಪಡಿಸಬೇಕು. ಖ್ಯಾತ ಗಾಯ ಅರಿಜಿತ್ ಸಿಂಗ್ ಈ ಹಾಡು ಹಾಡಬೇಕು. ನೇಪಾಳ ಕಲಾವಿದ ಸುಶಾಂತ್ ಖಾತ್ರಿ ನೃತ್ಯ ಸಂಯೋಜನೆ ಮಾಡಬೇಕು. ಪ್ರಧಾನಿ ಮೋದಿ ನನ್ನ ಈ ಆಸೆ ನೆರವೇರುವಂತೆ ಮುತುವರ್ಜಿ ವಹಿಸಬೇಕು ಎಂದು ಬಾಲಕ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.
ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸಂಜೀವ್ ನಯನ ಶರ್ಮಾ ತಿಳಿಸಿದ್ದಾರೆ.
ಒಂದೇ ದಿನ 14,313 ಜನರಿಗೆ ಕೊರೋನಾ ಸೋಂಕು 26,579 ಮಂದಿ ಗುಣಮುಖ, 181 ಜನರ ಸಾವು