newsics.com
ಮೊಹಾಲಿ: ಪ್ರಿಯಕರನೊಬ್ಬ ತನ್ನ ಪ್ರೇಯಸಿ ಮೇಲೆ ಗಂಭೀರ ಹಲ್ಲೆ ಮಾಡಿದ್ದಾನೆ. ಅಣ್ಣ ಮತ್ತು ಆತನ ಸ್ನೇಹಿತನ ಜತೆ ಮಂಚ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕೆ ಈ ಹಲ್ಲೆ ಮಾಡಲಾಗಿದೆ.
ಪಂಜಾಬಿನ ಮೊಹಾಲಿಯಲ್ಲಿ ಈ ಪ್ರಕರಣ ವರದಿಯಾಗಿದೆ. ಶನಿವಾರ ರಾತ್ರಿ ಹೊಟೇಲ್ ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ನಿರುದ್ಯೋಗಿಯಾಗಿರುವ ಪ್ರಿಯಕರ ತನ್ನ ಅಣ್ಣ ಮತ್ತು ಫ್ರೆಂಡ್ ಜತೆ ರಾತ್ರಿ ಕಳೆಯುವಂತೆ ಪ್ರಿಯತಮೆಯನ್ನು ಬಲವಂತಪಡಿಸಿದ್ದಾನೆ ಎಂದು ವರದಿಯಾಗಿದೆ.
ಇದಕ್ಕೆ ಅವಳು ನಿರಾಕರಿಸಿದಾಗ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.