newsics.com
ನವದೆಹಲಿ: ತೆಲುಗಿನ ʻಪುಷ್ಪಾ’ ಚಿತ್ರದಿಂದ ಪ್ರೇರಿತರಾದ ಮೂವರು ಬಾಲಕರು ಫೇಮಸ್ ಆಗಲು ವ್ಯಕ್ತಿಯೋರ್ವನನ್ನು ಕೊಂದು, ಅದರ ವೀಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಲು ಬಯಸಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ವಾಯುವ್ಯ ದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಮೂವರು ಬಾಲಾಪರಾಧಿಗಳು ವ್ಯಕ್ತಿಯನ್ನು ಕೊಂದಿದ್ದಾರೆ.ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಜಹಾಂಗೀರಪುರಿ ನಿವಾಸಿ 24 ವರ್ಷದ ಶಿಬು ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ತೆಲುಗಿನ ‘ಪುಷ್ಪಾ’ ಸಿನಿಮಾದಿಂದ ಪ್ರೇರಿತರಾಗಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿಯನ್ನು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಜಗಳ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಅಪರಾಧದ ವೀಡಿಯೊವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಮತ್ತು ಕೊಲೆಯ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.