Thursday, June 17, 2021

ರಾಮಮಂದಿರಕ್ಕೆಂದು ಕುಂಭಾಶಿಯಲ್ಲಿ ಬ್ರಹ್ಮರಥ ನಿರ್ಮಾಣ ಕಾರ್ಯ ಆರಂಭ

newsics.com

ಕುಂಭಾಶಿ(ಉಡುಪಿ): ಅಕ್ಷಯ ತೃತೀಯದ (ಮೇ 14) ಶುಭ ದಿನದಂದು ನಿನ್ನೆ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣ ಕಾರ್ಯ ಕುಂದಾಪುರ ತಾಲೂಕಿನ ಕುಂಭಾಶಿಯಲ್ಲಿ ಆರಂಭಗೊಂಡಿದೆ.
ಕಿಷ್ಕಿಂಧೆಯ ಹನುಮ ಜನ್ಮಭೂಮಿ ಕ್ಷೇತ್ರದ ಪರವಾಗಿ 4ಕೋಟಿ ರೂ. ವೆಚ್ಚದಲ್ಲಿ, 50 ಟನ್ ತೂಕದ ಬ್ರಹ್ಮರಥ ರಾಮಮಂದಿರಕ್ಕೆ ಸೇರಲಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿನ ರಥದ ಮಾದರಿಯಲ್ಲಿರುವ ಬ್ರಹ್ಮರಥವು, ಪ್ರಸಿದ್ದ ಶಿಲ್ಪಿಗಳಾದ ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ನೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು 50 ನುರಿತ ಕುಶಲಕರ್ಮಿಗಳ ತಂಡದಿಂದ ನಿರ್ಮಾಣವಾಗುತ್ತಿದೆ.

ಇದು 84 ಅಡಿ ಎತ್ತರ, 26 ಅಡಿ ಅಗಲದ ರಥದಲ್ಲಿ 10 ಅಡಿ ಎತ್ತರದ ಚಕ್ರಗಳಿದ್ದು, ರಥದ ಮಂಟಪ ಐದು ಅಡಿ ಇದೆ ಎಂದು ವರದಿಯಾಗಿದೆ.

ಕೊರೋನಾ ಅಬ್ಬರ: ನಿಗದಿಯಾದ ಮದುವೆ ಮುಂದೂಡಲು ಸ್ವರ್ಣವಲ್ಲಿ ಶ್ರೀ ಸೂಚನೆ

ಮತ್ತಷ್ಟು ಸುದ್ದಿಗಳು

Latest News

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ...

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ದಾಖಲೆಯ 33 ಸೆಂಟಿ ಮೀಟರ್ ಮಳೆ ಸುರಿದಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ ಸುರಿದಂತೆ ಮಳೆ, ರಾಜ್ಯದಲ್ಲೇ ಅತ್ಯಧಿಕ ದಾಖಲೆಯ...

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ...
- Advertisement -
error: Content is protected !!