ನವದೆಹಲಿ: 400 ಕಿಲೋ ಮೀಟರ್ ಗಿಂತ ದೂರದಲ್ಲಿರುವ ಗುರಿಯನ್ನು ಉಡಾಯಿಸಬಲ್ಲ ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಶಬ್ದಕ್ಕಿಂತ ವೇಗವಾಗಿ ಈ ಕ್ಷಿಪಣಿ ಗುರಿ ತಲುಪುತ್ತದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿವೆ.
ಚೀನಾದೊಂದಿಗೆ ಗಡಿ ಸಂಘರ್ಷ ದ ಈ ಸಂದರ್ಭದಲ್ಲಿ ಕ್ಷಿಪಣಿಯ ಯಶಸ್ವಿ ಪರೀಕ್ಷೆ ವಾಯು ಪಡೆಗೆ ಹೆಚ್ಚಿನ ಬಲ ನೀಡಲಿದೆ. ಭಾರತ ಈಗಾಗಲೇ ಚೀನಾ ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸಿದೆ.