ಅಹಮದಾಬಾದ್: ಮೂರು ತಿಂಗಳಲ್ಲಿ 12 ಲೀಟರ್ ಎದೆಹಾಲು ದಾನ ಮಾಡಿ ಐದು ನವಜಾತ ಶಿಶುಗಳ ಪ್ರಾಣ ಉಳಿಸಿದ ಇವರು ನಿಜಕ್ಕೂ ಗ್ರೇಟ್ ಅಮ್ಮ.
ಇವರು ರುಶಿನಾ ಡಾಕ್ಟರ್ ಮಾರ್ಫಾಟಿಯಾ (29). ಅವರ ಕಾರ್ಯ ಶ್ಲಾಘನೀಯ. ಅವಧಿಗೂ ಮೊದಲೇ ಜನಿಸಿದ ಐದು ಮಕ್ಕಳ ತಾಯಂದಿರಲ್ಲಿ ಎದೆ ಹಾಲು ಸಿಗದ್ದರಿಂದ ಶಿಶುಗಳು ಸಾವು ಬದುಕಿನ ಹೋರಾಟದಲ್ಲಿದ್ದವು. ರುಶಿನಾ ಅವರಿಂದಾಗಿ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಹಮದಾಬಾದ್ ನ ಅರ್ಪಣ್ ನವಜಾತ ಶಿಶುಗಳ ಆರೈಕೆ ಕೇಂದ್ರ ಕಳೆದ ವರ್ಷ ಪ್ರಾಯೋಗಿಕವಾಗಿ ಎದೆಹಾಲು ಸಂಗ್ರಹ ಕಾರ್ಯ ಆರಂಭಿಸಿದೆ. ರುಶಿನಾ ಅವರು ಈ ಕೇಂದ್ರದ ಮೂಲಕವೇ ಎದೆಹಾಲು ದಾನ ಮಾಡಿ ಮಕ್ಕಳನ್ನು ಉಳಿಸಿದ್ದಾರೆ ಎಂದು ಅರ್ಪಣ್ ನವಜಾತ ಶಿಶುಕೇಂದ್ರದ ನಿಯೋನಾಟಾಲಜಿಸ್ಟ್ ಡಾ. ಅಶೀಸ್ ಮೆಹ್ತಾ ತಿಳಿಸಿದ್ದಾರೆ. ಅರ್ಪಣ್ ಎದೆಹಾಲು ಸಂಗ್ರಹ ಕೇಂದ್ರಕ್ಕೆ 250 ಮಹಿಳೆಯರು ತಮ್ಮ ಎದೆಹಾಲನ್ನು ದಾನವಾಗಿ ನೀಡುತ್ತಿದ್ದಾರೆ.
ನನಗೆ ಸೆ.20ಕ್ಕೆ ಗಂಡು ಮಗು ಜನಿಸಿತು. ನನ್ನ ಮಗು ಹಾಲು ಕುಡಿದಾದ ಮೇಲೂ ನನ್ನಲ್ಲಿ ಎದೆಹಾಲು ಇರುತ್ತಿತ್ತು. ಹಾಗಾಗಿ ನಾನು ಅದನ್ನು ದಾನ ಮಾಡಲು ನಿರ್ಧರಿಸಿ ತಂದೆಗೆ ಹೇಳಿದಾಗ ಅವರು ಈ ಎದೆಹಾಲು ಸಂಗ್ರಹ ಕೇಂದ್ರವನ್ನು ಹುಡುಕಿದರು ಎಂದು ರಶೀನಾ ಹೇಳಿದ್ದಾರೆ. ರುಶಿನಾ ಕಾಲೇಜೊಂದರಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎದೆಹಾಲು ನೀಡಿ 5 ಶಿಶುಗಳ ಜೀವ ಉಳಿಸಿದ ರುಶಿನಾ!
Follow Us