ನವದೆಹಲಿ:ಗಡಿಯಲ್ಲಿ ಚೀನಾದ ದುಸ್ಸಾಹಸ ತಡೆಯಲು ಭಾರತ ಸಜ್ಜಾಗಿದೆ. ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸಲು ಭಾರತ ಎಲ್ಲ ಸಿದ್ದತೆ ಮಾಡಿಕೊಂಡಿದೆ. ತನ್ನ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಕ್ಷಿಪಣಿಗಳನ್ನು ಗಡಿಯಲ್ಲಿ ನಿಯೋಜಿಸಿದೆ. ಇದರಲ್ಲಿ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ಕೂಡ ಸೇರಿದೆ. ಇದು ಚೀನಾದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಶಬ್ದ್ದಕ್ಕಿಂತಲೂ ವೇಗವಾಗಿ ಚಲಿಸುವ ಶಕ್ತಿ ಹೊಂದಿದೆ. ಭಾರತ ತನ್ನ ಬಳಿ ಇರುವ ನಿರ್ಭಯ್ ಮತ್ತು ಆಕಾಶ್ ಕ್ಷಿಪಣಿಗಳನ್ನು ಗಡಿಯಲ್ಲಿ ನಿಯೋಜಿಸಿದೆ. ಚೀನಾ ಖಂಡಾಂತರ ಕ್ಷಿಪಣಿಗಳನ್ನು ಭಾರತ ಗಡಿಯಲ್ಲಿ ಸಜ್ಜುಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತ ಕೂಡ ತನ್ನ ವಾಯು ದಾಳಿಯ ಶಕ್ತಿ ಹೆಚ್ಚಿಸಿಕೊಂಡಿದೆ.
ಭಾರತದ ವಾಯುಪಡೆಯ ಎಲ್ಲ ಅತ್ಯಾಧುನಿಕ ವಿಮಾನಗಳು ಗಡಿಯಲ್ಲಿ ಶತ್ರುಪಡೆಯ ಚಟುವಟಿಕೆ ಮೇಲೆ ಕಣ್ಗಾವಲು ಇರಿಸಿವೆ