newsics.com
ಚೆನ್ನೈ: ಮದುವೆ ಮಂಟಪಕ್ಕೆ ವಧು ಮತ್ತು ವರ ಡಿಫೆರೆಂಟ್ ಆಗಿ ಎಂಟ್ರಿ ಕೊಡೋದು ಸಾಮಾನ್ಯ. ಇದೀ ರೀತಿಯ ಘಟನೆ ತಮಿಳುನಾಡಿನಲ್ಲಿ ವಿಕೋಪಕ್ಕೆ ಹೋಗಿದೆ.
ವಧು ಡಾನ್ಸ್ ಮಾಡುತ್ತಾ ಕಲ್ಯಾಣ ಮಂಟಪ ಪ್ರವೇಶಿಸಿದ್ದಕ್ಕೆ ವರ ಕುಪಿತನಾಗಿದ್ದಾನೆ. ಅಲ್ಲಿಗೇ ನಿಂತಿಲ್ಲ ಅವನ ಕೋಪ. ವಧುವಿಗೆ ತಾಳಿ ಕಟ್ಟುವ ಮೊದಲೇ ಕೆನ್ನೆಗೆ ಬಾರಿಸಿದ್ದಾನೆ. ವಧು ಕೂಡ ಸುಮ್ಮನಿರಲ್ಲಿಲ್ಲ. ಪ್ರತಿಯಾಗಿ ವರನ ಕಪಾಳಕ್ಕೆ ಹೊಡೆದು ಸೇಡು ತೀರಿಸಿಕೊಂಡಿದ್ದಾಳೆ.
ಈ ಘಟನೆ ನಡೆದದ್ದು ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ನುತಿ ಎಂಬಲ್ಲಿ. ಜನವರಿ 19ರಂದು ನಿಗದಿಯಾಗಿದ್ದ ಮದುವೆ ವೇಳೆ ಈ ಘಟನೆ ನಡೆದಿತ್ತು. ವಧುವಿನ ಕೆನ್ನೆಗೆ ವರ ಕಪಾಳಮೋಕ್ಷ ಮಾಡಿದ್ದನ್ನು ನೋಡಿದ ಆಕೆಯ ತಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಬೇಡ, ಮದುವೆ ಮಂಟಪದಿಂದ ಹೊರ ಹೋಗುವಂತೆ ವರ ಮತ್ತು ವರನ ಕುಟುಂಬಕ್ಕೆ ಸೂಚಿಸಿದರು. ಬಳಿಕ ಮದುವೆಗೆ ಬಂದಿದ್ದ ಇನ್ನೊಬ್ಬ ಯುವಕನ ಜತೆ ಉದ್ಯಮಿಯಾಗಿರುವ ಅವರು ತಮ್ಮ ಮಗಳ ಮದುವೆ ನೆರವೇರಿಸಿದ್ದಾರೆ.