newsics.com
ನವದೆಹಲಿ: ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು (ಸೆ.17) ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದು, ಇದಕ್ಕೆ ಮೋದಿ ಪ್ರತಿಕ್ರಿಯಿಸಿ ಕನ್ನಡದಲ್ಲೇ ಧನ್ಯವಾದಗಳು ಎಂದಿದ್ದಾರೆ. ಟ್ವೀಟ್’ನಲ್ಲಿ ‘ಧನ್ಯವಾದಗಳು ಬಿ,ಎಸ್ ಯಡಿಯೂರಪ್ಪನವರೇ’ ಎಂದು ಮೋದಿ ಹೇಳಿದ್ದಾರೆ. ಇಂದು ಪ್ರಧಾನಿ ಮೋದಿಯವರು ತಮ್ಮ 70 ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಕೊಂಡಿದ್ದು, ಈ ನಡುವೆ ದೇಶ-ವಿದೇಶಗಳಿಂದ ಜನಸಾಮಾನ್ಯರು ಹಾಗೂ ಗಣ್ಯರು ಶುಭಾಶಯಗಳನ್ನು ಕೋರುತ್ತಿದ್ದಾರೆ.
ಪ್ರಧಾನಿಗೆ ಬಿಎಸ್’ವೈ ಶುಭಾಶಯ; ಕನ್ನಡದಲ್ಲೇ ಧನ್ಯವಾದ ಎಂದ ಮೋದಿ!
Follow Us