ನವದೆಹಲಿ: ಕೇಂದ್ರ ಹಣಕಾಸು ಸಚಿವವೆ ನಿರ್ಮಲಾ ಸೀತಾರಾಮನ್ ಶನಿವಾರ ಲೋಕ ಸಭೆಯಲ್ಲಿ ಮಂಡಿಸಿರುವ 2020-21ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಪ್ರಧಾನ ಮಂತ್ರಿ ಭದ್ರತೆಗಾಗಿ 600 ಕೋಟಿ ರೂ. ಮೀಸಲಿರಿಸಲಾಗಿದೆ.
ಪ್ರಧಾನ ಮಂತ್ರಿಗೆ ಭದ್ರತೆ ಕಲ್ಪಿಸುವ ವಿಶೇಷ ರಕ್ಷಣಾ ಪಡೆ( ಎಸ್ ಪಿ ಜಿ)ಯಲ್ಲಿ 300 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗಾಗಿ ಕಳೆದ ವರ್ಷ 540 ಕೋಟಿ ರೂ ಹಂಚಿಕೆ ಮಾಡಲಾಗಿತ್ತು. ಅದನ್ನು ಈ ವರ್ಷ 600 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಈ ಹಿಂದೆ ಗಾಂಧಿ ಕುಟುಂಬ ಸದಸ್ಯರಿಗೂ ಎಸ್ಪಿಜಿ ಭದ್ರತೆ ಒದಗಿಸಲಾಗಿತ್ತಾದರೂ, 2019ರ ನವೆಂಬರ್ನಿಂದ ಅದನ್ನು ಹಿಂಪಡೆಯಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೇವೇಗೌಡ ಕೂಡ ಎಸ್ ಜಿ ಜಿ ಭದ್ರತಾ ಪಟ್ಟಿಯಲ್ಲಿದ್ದಾರೆ.
ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ !
Follow Us