ನವದೆಹಲಿ: 2023ರ ವೇಳೆಗೆ ದೇಶದಲ್ಲಿ ಆರು ಬುಲೆಟ್ ರೈಲುಗಳು ಸಂಚಾರ ಆರಂಭಿಸಲಿದ್ದು, ಬೆಂಗಳೂರು, ಮೈಸೂರಿಗೂ ಬುಲೆಟ್ ರೈಲು ಸಂಪರ್ಕ ಕಲ್ಪಿಸಲಿದೆ.
ದೇಶದಲ್ಲಿ ಒಟ್ಟು ಆರು ಮಾರ್ಗಗಳಲ್ಲಿ ಬುಲೆಟ್ ರೈಲು ಬಿಡುವ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ವಾರಾಣಸಿ, ಅಹಮದಾಬಾದ್, ಮುಂಬೈ, ಜೈಪುರ, ಚೆನ್ನೈ, ಚಂಡೀಗಢ, ಅಮೃತಸರಗಳಲ್ಲಿ ಈ ರೈಲು ಸಂಚರಿಸಲಿದೆ.
ಒಟ್ಟು ಆರು ಬುಲೆಟ್ ರೈಲುಗಳು ಭಾರತಕ್ಕೆ ಬರಲಿವೆ. ಡಿಪಿಆರ್ ಸಿದ್ಧವಾದ ನಂತರ ಅದಕ್ಕೆ ಹಣ ಮಂಜೂರು ಮಾಡುವುದಾಗಿ ಸರ್ಕಾರ ತಿಳಿಸಿದೆ.
ಈ ಎಲ್ಲ ಮಾರ್ಗಗಳಲ್ಲಿ ಸಂಚಾರ ಮಾಡಲಿರುವ ರೈಲುಗಳು ಹೈ-ಸ್ಪೀಡ್ (ಗಂಟೆಗೆ 300 ಕಿ.ಮೀ) ಅಥವಾ ಸೆಮಿ ಹೈ ಸ್ಪೀಡ್ (ಗಂಟೆಗೆ 160-250 ಕಿ.ಮೀ) ವೇಗದಲ್ಲಿ ಸಂಚರಿಸಲಿವೆ.
2023 ಕ್ಕೆ ದೇಶದ ಆರು ಮಾರ್ಗಗಳಲ್ಲಿ ಬುಲೆಟ್ ರೈಲು ಸಂಚಾರ
Follow Us