Tuesday, April 13, 2021

ಅಸ್ಸಾಂನಲ್ಲಿ ಹೊತ್ತಿ ಉರಿಯುತ್ತಿರುವ ತೈಲ ಬಾವಿ

ಅಸ್ಸಾಮ್: ತೀನ್​ಸುಕಿಯಾ ಜಿಲ್ಲೆಯ ಬಾಘಜನ್ ನ ಆಯಿಲ್ ಇಂಡಿಯಾ ಸಂಸ್ಥೆಗೆ ಸೇರಿದ ತೈಲಬಾವಿಯೊಂದು ಹೊತ್ತಿ ಉರಿಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ಸಾಕಷ್ಟು ಯತ್ನ ನಡೆಸಿದ್ದರೂ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಈ ತೈಲಬಾವಿಯಲ್ಲಿ ಎರಡು ವಾರದ ಹಿಂದೆ ಉಂಟಾದ ಸ್ಫೋಟದಿಂದ ಅನಿಲ ಸೋರಿಕೆ ಪ್ರಾರಂಭವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಸೋರಿಕೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಸಿಂಗಾಪುರದ ಅಲರ್ಟ್ ಡಿಸಾಸ್ಟರ್ ಕಂಟ್ರೋಲ್ ಸಂಸ್ಥೆಯ ಮೂವರು ತಜ್ಞರು ಸ್ಥಳಕ್ಕೆ ಬಂದು ದುರಸ್ತಿಯ ಪ್ರಯತ್ನದಲ್ಲಿದ್ದರು. ಕೆಲ ಉಪಕರಣ ಹೊರತೆಗೆಯಲು ಯತ್ನಿಸುತ್ತಿದ್ದಾಗಲೇ ಮಧ್ಯಾಹ್ನದ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ.
ತೈಲ ಬಾವಿಗೆ ಹೊತ್ತಿರುವ ಬೆಂಕಿ ಎರಡು ಕಿಮೀ ದೂರದಲ್ಲೂ ಗೋಚರಿಸುವಷ್ಟು ರೌದ್ರವಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಜೀವಹಾನಿ ಅಥವಾ ಗಾಯವಾದ ವರದಿಯಾಗಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!