newsics.com
ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ ಗಾಂ ಎಂಬಲ್ಲಿ ಇಂಡೋ ಟಿಬೇಟಿಯನ್ ಗಡಿ ಭದ್ರತಾಪಡೆ ಯೋಧರು ಪ್ರಯಾಣಿಸುತ್ತಿದ್ದ ಬಸ್ ನದಿಗೆ ಬಿದ್ದ ಪರಿಣಾಮ ಆರು ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.
ಬಸ್ ನಲ್ಲಿ ಐಟಿಬಿಪಿಗೆ ಸೇರಿದ 37 ಯೋಧರು ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
30 ಯೋಧರಿಗೆ ಗಾಯಗಳಾಗಿದ್ದು ಅವರನ್ನು ಅನಂತನಾಗ್ ನಲ್ಲಿರುವ ಆಸ್ಪತ್ಪೆಗೆ ಸೇರಿಸಲಾಗಿದೆ.
ದುರಂತ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ