ವಿಕಾರಾಬಾದ್: ಮನೆಗೆ ಹೋಗಲು ಬಸ್ಸಿಲ್ಲವೆಂಬ ಕಾರಣಕ್ಕೆ ಪಾನಮತ್ತನೊಬ್ಬ ಸರ್ಕಾರಿ ಬಸ್ಸನ್ನೇ ಕದ್ದಿದ್ದಾನೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ಈ ಘಟನೆ ನಡೆದಿದೆ.
ರಾತ್ರಿ 9 ಗಂಟೆಗೆ ತಾಂಡೂರು ಡಿಪೋದಿಂದ ಓಗಿಪುರಕ್ಕೆ ಟಿಎಸ್ಆರ್ಟಿಸಿ ಬಸ್ ಹೊರಟಿತ್ತು. ಆ ಊರಿಗೆ ಕೊನೆಯ ಬಸ್ ಆಗಿದ್ದ ಅದರಲ್ಲಿ 15 ಪ್ರಯಾಣಿಕರಿದ್ದರು. ಬಸ್ಸಿನ ಡ್ರೈವರ್, ಕಂಡಕ್ಟರ್ ಊಟಕ್ಕೆಂದು ಹೋಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬಸ್ ಓಡಿಸಲಾರಂಭಿಸಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಕಳ್ಳ ಬಸ್ಸನ್ನು ಹೇಗೆಂದರೇಗೆ ಓಡಿಸಲಾರಂಭಿಸಿದಾಗ ಪ್ರಯಾಣಿಕರು ಆತನನ್ನು ಕಂಡಕ್ಟರ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಕಂಡಕ್ಟರ್ಗೆ ಹುಷಾರಿಲ್ಲ. ನೀವು ನನಗೆ ಹಣ ಕೊಡಿ ಎಂದು ಕೇಳಿದ್ದಾನೆ. ಆಗ ಪ್ರಯಾಣಿಕರು ಡಿಪೋ ಮ್ಯಾನೇಜರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಸ್ ಓಡಿಸಿದ ವ್ಯಕ್ತಿಗಾಗಿ ಶೋಧ ಮುಂದುವರಿಸಿದ್ದಾರೆ.
ಮನೆಗೆ ತೆರಳಲೆಂದು ಬಸ್ಸನ್ನೇ ಕದ್ದ ಪಾನಮತ್ತ!
Follow Us