Thursday, December 8, 2022

ಅಪರೂಪದ ಚಿಟ್ಟೆ ಕಂಡು ವನದೇವಿಯೆಂದು ಪೂಜೆ ಮಾಡಿದ ಜನ!

Follow Us

newsics.com

ಬಿಹಾರ: ಬಿಹಾರದಲ್ಲಿ ಹಾವಿನ ಮುಖದ ರೂಪವಿರುವ ಅಪರೂಪದ ಚಿಟ್ಟೆಯೊಂದು ಕಾಣಿಸಿಕೊಂಡಿದ್ದು, ವನದೇವಿಯೆಂದು ಪೂಜೆ ಮಾಡಿದ್ದಾರೆ.

ರಾತ್ರಿ ವೇಳೆ ಬಲ್ಬ್ ಬೆಳಕಿಗೆ ಆಕರ್ಷಣೆಗೊಂಡು ಈ ಚಿಟ್ಟೆ ಕಾಣಿಸಿಕೊಂಡಿದೆ. ಈ ವಿಚಿತ್ರ ಚಿಟ್ಟೆಯನ್ನು ವನದೇವಿಯ ಅವತಾರ ಎಂದೇ ಪರಿಗಣಿಸಿ ತುಪ್ಪದ ದೀಪ ಹಚ್ಚಿ ಪೂಜಿಸಿದ್ದಾರೆ.

ಚಂಪಾರಣ್ಯ ಪ್ರದೇಶದ ಅಂಚಿನಲ್ಲಿರುವ ಬಗಾಹಾದಲ್ಲಿ ಇಂತಹ ಅಪರೂಪದ ಜಾತಿಯ ಕೀಟಗಳು ಕಂಡುಬರುತ್ತವೆ. ಹಾವಿನಂತೆ ಕಾಣುವ ಈ ಚಿಟ್ಟೆಯನ್ನು ಅಟ್ಲಾಸ್ ಎಂದು ಕರೆಯಲಾಗುತ್ತದೆ. ಇದು ಪತಂಗಗಳಲ್ಲಿಯೇ ದೊಡ್ಡ ದೇಹ ಹೊಂದಿದೆ. ಈ ಚಿಟ್ಟೆ ತನ್ನ ಜೀವಕ್ಕೆ ಬೆದರಿಕೆ ಬಂದಾಗ, ಪರಭಕ್ಷಕಗಳನ್ನು ಹೆದರಿಸಲು ಹಾವಿನ ತಲೆಯಂತೆ ಕಾಣುವ ತನ್ನ ರೆಕ್ಕೆಗಳನ್ನು ಬಡಿಯುತ್ತದೆ.

ಈ ಅಟ್ಲಾಸ್ ಚಿಟ್ಟೆ ಭಾರತವಲ್ಲದೆ ಆಫ್ರಿಕಾ, ಸ್ಪೇನ್, ಜಪಾನ್, ಚೀನಾ, ಮಲೇಷ್ಯಾ, ಅಮೆರಿಕ ಮೊದಲಾದ ದೇಶಗಳಲ್ಲಿ ಕಂಡುಬರುತ್ತದೆ. ಇದನ್ನು ಆಯಾ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಕುಡಿತದ ಚಟಕ್ಕೆ ಸರ್ಕಾರಿ ಕಚೇರಿ ಪೀಠೋಪಕರಣಗಳನ್ನೇ ಮಾರಿದ ಪ್ಯೂನ್!

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!