ನವದೆಹಲಿ: ಪ್ರತಿಭಟನೆಗಳಲ್ಲಿ ಮಕ್ಕಳು ಹಾಗೂ ಹಸುಗೂಸುಗಳನ್ನು ಬಳಸಿಕೊಳ್ಳುವ ಪದ್ಧತಿಯನ್ನು ಸ್ಥಗಿತಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮರಳುವ ವೇಳೆ ನಾಲ್ಕು ತಿಂಗಳ ಮಗು ನಿದ್ರೆಯಲ್ಲಿಯೇ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಪ್ರತಿಕ್ರಿಯೆ ನೀಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಪತ್ರ ಬರೆದಿದ್ದ 12 ವರ್ಷದ ಬಾಲಕ ಸದಾವಾರ್ತೆ ಎಂಬ ಸುಪ್ರೀಂಕೋರ್ಟ್ ಗೆ ಪತ್ರ ಬರೆದಿದ್ದನು.