ಲಖನೌ: ಸಿಎಎ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯುಂಟುಮಾಡಿದ 498 ಪ್ರತಿಭಟನಾಕಾರರ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರ ಜಪ್ತಿ ಮಾಡಲಿದೆ.
ಈ ಸಂಬಂಧ ಈಗಾಗಲೇ ಪ್ರತಿಭಟನಾಕಾರರಿಗೆ ಸರ್ಕಾರ ನೋಟಿಸ್ ಕಳುಹಿಸಿದೆ. ಡಿ.10ರಿಂದ 24ರವರೆಗಿನ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಮಾಡಿದವರಲ್ಲಿ ಮೀರತ್ ನಲ್ಲಿ 148, ಲಖನೌ 82, ರಾಮ್ಪುರ್ 79, ಮುಜಾಫರ್ನಗರ 73, ಕಾನ್ಪುರ 50, ಸಾಂಬಲ್ 26, ಬುಲಂದ್ಶಹರ್ 19, ಫಿರೋಜಾಬಾದ್ 13, ಮಾವೋದಲ್ಲಿ 8 ಮಂದಿಯ ಗುರುತು ಪತ್ತೆಹಚ್ಚಲಾಗಿದೆ. ಈವರೆಗೆ 213 ಎಫ್ಐಆರ್ಗಳು ದಾಖಲಾಗಿದ್ದು, ಒಟ್ಟು 925 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಲಖನೌ ಡಿಜಿಪಿ ಮುಖ್ಯಕಚೇರಿ ಮಾಹಿತಿ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಾಕಿದವರ ವಿರುದ್ಧ ಈವರೆಗೂ 81 ಎಫ್ಐಆರ್ ದಾಖಲಾಗಿದ್ದು, 120 ಆರೋಪಿಗಳನ್ನು ಬಂಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ 144 ಸೆಕ್ಷನ್ ಹೇರಲಾಗಿದೆ. ಹಲವು ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ.
ಸಿಎಎ ಪ್ರತಿಭಟನೆ; 498 ಪ್ರತಿಭಟನಾಕಾರರ ಆಸ್ತಿ ಜಪ್ತಿಗೆ ಕ್ರಮ
Follow Us