Monday, June 14, 2021

ಸಿಎಎ ಬೆಂಬಲಿಸಿ ಮೋದಿಗೆ ಪತ್ರ ಬರೆಯಲು ವಿದ್ಯಾರ್ಥಿಗಳಿಗೆ ಶಿಕ್ಷಕರ ಸೂಚನೆ

ಅಹಮದಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಯ ಪತ್ರ ಬರೆಯುವಂತೆ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದ್ದ ಗುಜರಾತ್ ಶಾಲೆಯೊಂದು, ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿದೆ. ಅಹಮದಾಬಾದ್ ನ ಖಾಸಗಿ ಶಾಲೆಯೊಂದು ಮಕ್ಕಳಿಗೆ ಬ್ಲಾಕ್ ಬೋರ್ಡ್ ಮೇಲೆ ಮೋದಿಗೆ ಶುಭಾಷಯ ಸಂದೇಶ ಬರೆದು ಅದನ್ನು ಪೋಸ್ಟ್ ಕಾರ್ಡ್ ನಲ್ಲಿ ನಕಲಿಸುವಂತೆ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು.  ಈ ಸಂದೇಶ “ಅಭಿನಂದನೆಗಳು, ನಾನು ಭಾರತದ ಪ್ರಜೆಯಾಗಿ ಸಿಎಎ ಜಾರಿಗೆ ತಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ನಾನು ಮತ್ತು ನನ್ನ ಕುಟುಂಬ ಈ ಕಾಯ್ದೆಯನ್ನು ಬೆಂಬಲಿಸುತ್ತದೆ ” ಎಂಬುದಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಫ್ರೆಂಚ್ ಓಪನ್ ಟೆನಿಸ್: 19ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್

newsics.com ಪ್ಯಾರಿಸ್: ನೋವಾಕ್ ಜೊಕೋವಿಚ್ 19 ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಆಟಗಾರ...

ನೆತನ್ಯಾಹು ಆಡಳಿತ ಅಂತ್ಯ: ನಫ್ತಾಲಿ ಬೆನೆಟ್ ಇಸ್ರೇಲ್’ನ ಹೊಸ ಪ್ರಧಾನಿ

newsics.com ಜೆರುಸಲೇಮ್: ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಕಾಲ ಇಸ್ರೇಲ್ ಆಳಿದ ಖ್ಯಾತಿಯ ಬೆಂಜಮಿನ್ ನೆತನ್ಯಾಹು ಅವರ 12 ವರ್ಷಗಳ ಆಡಳಿತ ಅಂತ್ಯವಾಗಿದೆ. ಇಸ್ರೇಲ್ ಸಂಸತ್ತಿನಲ್ಲಿ ಭಾನುವಾರ...

ಹಣ ಕೊಡದಿದ್ದರೆ ಆ್ಯಸಿಡ್ ಎರಚುವ ಬೆದರಿಕೆ: ಬಾಯ್’ಫ್ರೆಂಡ್ ವಿರುದ್ಧ ಯುವತಿ ದೂರು

newsics.com ಬೆಂಗಳೂರು: ಐಪೋನ್ ಕೊಡಿಸದಿದ್ದರೆ ಆ್ಯಸಿಡ್ ಎರಚುವುದಲ್ಲದೆ, ಖಾಸಗಿ‌ ಫೋಟೋಗಳನ್ನು ಹರಿಬಿಡುವುದಾಗಿ ತನ್ನ ಬಾಯ್'ಫ್ರೆಂಡ್ ಬೆದರಿಸಿದ್ದಾನೆಂದು ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಒಂದೂವರೆ ಲಕ್ಷ ರೂ. ಮೌಲ್ಯದ ಐಫೋನ್ 12 ಪ್ರೊ...
- Advertisement -
error: Content is protected !!