ನವದೆಹಲಿ: ವಿಶೇಷ ವರ್ಗದ ಮಹಿಳೆಯರಿಗೆ ಗರ್ಭಪಾತದ ಅವಧಿಯ ಮಿತಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ,
ಇದನ್ನು ವೈದ್ಯಕೀಯ ಮುಕ್ತಾಯದ ಗರ್ಭಪಾತ (ಎಂಟಿಪಿ) ನಿಯಮಗಳ ತಿದ್ದುಪಡಿ ಎಂದು ವ್ಯಾಖ್ಯಾನಿಸಲಾಗಿದ್ದು, ‘ದುರ್ಬಲ ಮಹಿಳೆ, ಅತ್ಯಾಚಾರ ಸಂತ್ರಸ್ತರು, ವಿಶೇಷ ಚೇತನರು, ಅಪ್ರಾಪ್ತ ವಯಸ್ಸಿಗೆ ತಾಯಿಯಾಗುವ ಬಾಲಕಿಯರಿಗೆ ಇದು ಅನ್ವಯವಾಗಲಿದೆ .ಈ ಮೊದಲು ಗರ್ಭಪಾತ ಮಿತಿ 20 ವಾರಗಳಿಗೆ ಸೀಮಿತಗೊಂಡಿತ್ತು.
ಇದಕ್ಕಾಗಿ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆ (1971) ಗೆ ತಿದ್ದುಪಡಿ ತರುವ 2020 ರ ವೈದ್ಯಕೀಯ (ತಿದ್ದುಪಡಿ) ಮಸೂದೆಗೆ ಸಂಪುಟ ಅನುಮೋದನೆ ನೀಡಿದೆ.
ಗರ್ಭಪಾತ ಅವಧಿಯ ಮಿತಿ ಹೆಚ್ಚಳಕ್ಕೆ ಸಂಪುಟ ಅಸ್ತು
Follow Us