ವಾರಾಣಸಿ: ವಾರಾಣಸಿಯಲ್ಲಿ ನಾಲ್ಕು ಆ್ಯಸಿಡ್ ಸಂತ್ರಸ್ತರು ಒಟ್ಟಾಗಿ ಶೀಘ್ರದಲ್ಲೇ ಇಲ್ಲಿನ ದುರ್ಗಾ ಕುಂಡ್ ಪ್ರದೇಶದಲ್ಲಿ ‘ದಿ ಆರೆಂಜ್ ಕೆಫೆ’ ಎಂಬ ರೆಸ್ಟೋರೆಂಟ್ ತೆರೆಯಲಿದ್ದಾರೆ.
ಮಹಿಳೆಯರಿಗೆ
ಸ್ವಯಂ ರಕ್ಷಣೆಯ ತರಬೇತಿ ನೀಡುವ ‘ರೆಡ್ ಬ್ರಿಗೆಡ್ ’ ಎನ್ ಜಿಓ ಸಂಸ್ಥಾಪಕ ಅಜಯ್ ಕುಮಾರ್
ಪಟೇಲ್ ಎಂಬುವವರು ಈ ಮಹಿಳೆಯರನ್ನು ಒಂದುಗೂಡಿಸಿ
ಕೆಫೆ ಆರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ಲಖನೌ ಮತ್ತು ಆಗ್ರಾದಲ್ಲಿ ಆ್ಯಸಿಡ್ ಸಂತ್ರಸ್ತರ
ಕೆಫೆ ಚಾಲ್ತಿಯಲ್ಲಿವೆ.