Thursday, December 8, 2022

ಬಿಲ್ ಪಾವತಿಗೆ ಮೊಬೈಲ್ ನಂಬರ್ ಕೇಳುವಂತಿಲ್ಲ: ಐಟಿ ಇಲಾಖೆ ವಾರ್ನಿಂಗ್

Follow Us

newsics.com

ಹೈದರಾಬಾದ್: ಒಪ್ಪಿಗೆ ಇಲ್ಲದೇ ವೈಯಕ್ತಿಕ ಫೋನ್ ನಂಬರ್ ಪಡೆದುಕೊಳ್ಳುವುದು ನಿಯಮಗಳ ಉಲ್ಲಂಘನೆ ಎಂದು ಐಟಿ ಇಲಾಖೆ ಹೇಳಿದೆ.

ನಗರದ ಶಾಪಿಂಗ್ ಮಾಲ್‌, ವಾಣಿಜ್ಯ ಸಂಸ್ಥೆಗಳಲ್ಲಿ ಖರೀದಿ ಮಾಡುವಾಗ ಕಡ್ಡಾಯವಾಗಿ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳುವ ಅವರು, ಅವನ್ನು ಕಾಲ್ ಸೆಂಟರ್‌ಗಳಿಗೆ ನೀಡುತ್ತಿದ್ದಾರೆ. ಈ ಮಾಹಿತಿ ಸೈಬರ್ ಕಳ್ಳರ ಪಾಲಾಗುತ್ತಿರುವುದರಿಂದ ಅನೇಕರು ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿದ್ದಾರೆ.

ವೈಯಕ್ತಿಕ ಮಾಹಿತಿಗಳು ಮಾರುಕಟ್ಟೆಯಲ್ಲಿ ಸರಕಿನಂತೆ ಮಾರಾಟವಾಗುತ್ತಿರುವುದರಿಂದ ಗ್ರಾಹಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಐಟಿ ಇಲಾಖೆ ಈ ಬಗ್ಗೆ ಗಂಭೀರವಾಗಿದೆ.

ಬಿಲ್ ಪಾವತಿಸಲು ವೈಯಕ್ತಿಕ ದೂರವಾಣಿ ಸಂಖ್ಯೆ ಕಡ್ಡಾಯ ಎಂದು ಡೆಕಥ್ಲಾನ್ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಇತ್ತೀಚೆಗೆ ಮಲಕಪೇಟೆಯ ಡೆಕಥ್ಲಾನ್‌ನಲ್ಲಿ ಶಾಪಿಂಗ್ ಮಾಡಿದ ತಾರ್ನಾಕ ಪ್ರದೇಶದ ವಿಜಯ್ ಗೋಪಾಲ್ ಎಂಬುವರು ದೂರು ನೀಡಿದ್ದರು. ಇದು ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಟಿ ಇಲಾಖೆ ಪ್ರತಿಕ್ರಿಯಿಸಿದೆ.

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಪತ್ತೆ

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!