ಅಮೃತ್ಸರ: ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆಂಬ ಆರೋಪದ ಮೇಲೆ ಬಾಲಿವುಡ್ ನಟಿ ರವೀನಾ ಟಂಡನ್, ನಿರ್ದೇಶಕಿ ಫರಾಹ್ ಖಾನ್ ಮತ್ತು ಹಾಸ್ಯನಟಿ ಭಾರ್ತಿ ಸಿಂಗ್ ವಿರುದ್ಧ ಅಮೃತ್ಸರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕ್ರಿಸ್ಮಸ್ ಮುನ್ನಾದಿನ ಪ್ರಸಾರವಾಗಿದ್ದ ಟಿವಿ ಶೋ ಒಂದರಲ್ಲಿ ಈ ಮೂವರೂ ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ರಿಶ್ಚಿಯನ್ ಫ್ರಂಟ್ನ ಅಜ್ನಾಲಾ ಬ್ಲಾಕ್ ಅಧ್ಯಕ್ಷ ಸೋನು ಜಾಫರ್ ಎಂಬುವರು ದೂರು ನೀಡಿದ್ದರು.
ನಟಿ ರವೀನಾ ಟಂಡನ್ ಸೇರಿ ಮೂವರ ವಿರುದ್ಧ ಕೇಸ್
Follow Us